ETV Bharat / state

ಸರ್ಕಾರಿ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸಿದ ಗದಗ ಜಿಲ್ಲಾಧಿಕಾರಿ... ಮಾದರಿಯಾದ ಡಿಸಿ ಸರಳತೆ - ಸರ್ಕಾರಿ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸಿದ ಜಿಲ್ಲಾಧಿಕಾರಿ

ಗದಗ ಜಿಲ್ಲೆಗೆ ಹೊಸದಾಗಿ ನೇಮಕವಾಗಿರುವ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಅವರು ಕಳೆದ 2-3 ಮೂರು ತಿಂಗಳಿಂದ ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ತಮ್ಮ ಪತ್ನಿ ಶಿವಶಂಕರಿ ಅವರಿಗೆ ತಪಾಸಣೆ ‌ಮಾಡಿಸಿದ್ದರು. ಇದೀಗ ಪತ್ನಿ ಹೆರಿಯನ್ನೂ ಸಹ ಜಿಲ್ಲಾಸ್ಪತ್ರೆಯಲ್ಲಿ ಮಾಡಿಸುವ ಮೂಲಕ ಮಾದರಿ ಆಗಿದ್ದಾರೆ.

Gadag DC
ಗದಗ ಡಿಸಿ‌ ಎಂ. ಸುಂದರೇಶ ಬಾಬು
author img

By

Published : Aug 9, 2020, 1:53 PM IST

ಗದಗ: ಐಷಾರಾಮಿ ಸವಲತ್ತುಗಳನ್ನ ಬದಿಗೆ ತಳ್ಳಿ ತಮ್ಮ ಪತ್ನಿಗೆ ಸಾಮಾನ್ಯ ಜನರಂತೆ ಸರ್ಕಾರಿ‌ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಮೂಲಕ ಜಿಲ್ಲಾಧಿಕಾರಿ‌ ಎಂ. ಸುಂದರೇಶ ಬಾಬು ಸರಳತೆ ಮೆರೆದಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸಿದ ಗದಗ ಜಿಲ್ಲಾಧಿಕಾರಿ

ಕೊರೊನಾ ಆತಂಕದ ನಡುವೆಯೂ ಜಿಲ್ಲಾಧಿಕಾರಿಗಳ ಈ ನಡೆ ನಮ್ಮ ಸಮಾಜಕ್ಕೆ‌ ಮಾದರಿಯಾಗಿದೆ ಎಂದು ಜನ ಕೊಂಡಾಡುತ್ತಿದ್ದಾರೆ. ಗದಗ ಜಿಲ್ಲೆಗೆ ಹೊಸದಾಗಿ ನೇಮಕವಾಗಿರುವ ಡಿಸಿ ಎಂ. ಸುಂದರೇಶಬಾಬು ಅವರು ಕಳೆದ 2-3 ಮೂರು ತಿಂಗಳಿಂದ ನಗರದ ಕೆ.ಸಿ.ರಾಣಿ ರಸ್ತೆಯಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ತಮ್ಮ ಪತ್ನಿ ಶಿವಶಂಕರಿ ಅವರಿಗೆ ತಪಾಸಣೆ ‌ಮಾಡಿಸಿದ್ದರು. ಇಂದು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಇಂದು ಬೆಳಗ್ಗೆ 5-30 ಕ್ಕೆ ಗಂಡು ಮಗುವಿಗೆ ಅವರು ಜನ್ಮ ನೀಡಿದ್ದಾರೆ. ಸದ್ಯ ಮಗು ಮತ್ತು ತಾಯಿ ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶಸ್ತ್ರ ಚಿಕಿತ್ಸಕ ಡಾ. ಕರಿಗೌಡರ ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲೆ ನಂಬಿಕೆ ಇಟ್ಟು ತಮ್ಮ ಪತ್ನಿಗೆ ನಮ್ಮ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದು ನಮಗೆ ಹರ್ಷ ತಂದಿದೆ. ನಮ್ಮ ಮೇಲೆ ನಂಬಿಕೆ ಇಟ್ಟಿರುವ ಜಿಲ್ಲಾಧಿಕಾರಿಗೆ ಧನ್ಯವಾದಗಳು. ಜೊತೆಗೆ ಸರಳತೆ ಜೀವನ ರೂಢಿಸಿಕೊಂಡಿರುವ ಜಿಲ್ಲಾಧಿಕಾರಿಗಳು ನಮ್ಮ ಜಿಲ್ಲೆಗೆ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.