ETV Bharat / state

ಗವಾಯಿ ನಾಡಿಗೆ ಮುಳುವಾದ ಮುಂಬೈನಿಂದ ಬಂದ ವ್ಯಕ್ತಿಯ ಟ್ರಾವೆಲ್​ ಹಿಸ್ಟರಿ - ಕೋವಿಡ್​-19

ಮುಂಬೈ ನಿಂದ ಗದಗ ಜಿಲ್ಲೆಗೆ ಬಂದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬನ ಸಂಚಾರ ಇತಿಹಾಸ ಜಿಲ್ಲೆಯ ಜನರನ್ನು ಭಯಭೀತರನ್ನಾಗಿಸಿದೆ. ಅಲ್ಲದೆ ಸಹ ಪ್ರಯಾಣಿಕರಿಗೆ ಮುಂಜಾಗ್ರತ ಕ್ರಮವಾಗಿ ಕ್ವಾರಂಟೈನ್​ ಮಾಡಲು ಗದಗ ಜಿಲ್ಲಾಡಳಿತ ತಯಾರಿ ನಡೆಸುತ್ತಿದೆ.

gadag-corona-cases
ಗದಗ ಜಿಲ್ಲೆ
author img

By

Published : May 22, 2020, 12:28 PM IST

ಗದಗ: ಮುಂಬೈನಿಂದ ನಗರಕ್ಕೆ ಬಂದ ಕೊರೊನಾ ಸೋಂಕಿತನ ಟ್ರಾವೇಲ್​ ಹಿಸ್ಟರಿಯಿಂದ ಜಿಲ್ಲೆಯ ಜನರು ಬೆಚ್ಚಿ ಬೀಳುವಂತಾಗಿದ್ದು, ರೋಗಿಯ ಸಹ ಪ್ರಯಾಣಿಕರನ್ನು ನಿಗಾದಲ್ಲಿಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ರೋಗಿ-1566 32 ವರ್ಷದ ವ್ಯಕ್ತಿ ಮಹಾರಾಷ್ಟ್ರದ ಮುಂಬೈಯಿಂದ ಹುಬ್ಬಳ್ಳಿಯವರಿಗೆ ವಿಶೇಷ ಬಸ್​ನಲ್ಲಿ ಪ್ರಯಾಣ ಮಾಡಿದ್ದ. ಬಳಿಕ ಹುಬ್ಬಳ್ಳಿಯಿಂದ ಗದಗ ಬಸ್ ನಿಲ್ದಾಣದವರಿಗೆ ಸಾರಿಗೆ ಸಂಸ್ಥೆಯ ಬಸ್​ನಲ್ಲಿ ಪ್ರಯಾಣ ಮಾಡಿದ್ದಾನೆ. ಇನ್ನು ಗದಗ ನಿಂದ ಶಿರಹಟ್ಟಿವರೆಗೆ ಮತ್ತೊಂದು ಬಸ್​ನಲ್ಲಿ‌ ಪ್ರಯಾಣಿಸಿದ್ದು, ಬಳಿಕ ಆತನಿಗೆ ಶಿರಹಟ್ಟಿ ತಾಲೂಕಿನ ವರವಿ ಬಳಿಯ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ನಿಗಾದಲ್ಲಿದ್ದ ವೇಳೆ ಕರೊನಾ ಸೋಂಕು ಧೃಡಪಟ್ಟಿದೆ.‌ ಸದ್ಯ ಆತ ಪ್ರಯಾಣ ಮಾಡಿದ್ದ ಬಸ್​​ನಲ್ಲಿನ ಸಹ ಪ್ರಯಾಣಿಕರಿಗೆ ಹೆದರಿಕೆ ಶುರುವಾಗಿದೆ. ಈಗಾಗಲೇ ಗದಗ ಮತ್ತು ಧಾರವಾಡ ಜಿಲ್ಲಾಡಳಿತ ಪರಸ್ಪರ ಮಾಹಿತಿ ಹಂಚಿಕೊಂಡಿದ್ದು, ಸಹ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೆ ಉಳಿದ ಪ್ರಯಾಣಿಕರ ಪತ್ತೆ ಕಾರ್ಯ ಸಹ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.