ಗದಗ: ತಲೆನೋವಿಗೆ ಬೇಸತ್ತು ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಗದಗ ತಾಲೂಕಿನ ಮುಳಗುಂದ ಪಟ್ಟಣದ ಬಣಕಾರ ಓಣಿಯ ನಿವಾಸಿ ಲಕ್ಷ್ಮೀ (22) ನೇಣಿಗೆ ಶರಣಾದ ಯುವತಿ. ಈ ಹಿಂದೆ ಹಲವಾರು ಬಾರಿ ತಲೆನೋವಿಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಳು.
ಆದರೆ ತಲೆನೋವು ಕಡಿಮೆ ಆಗಿರಲಿಲ್ಲ. ಮುಂದೆಯೂ ಸಹ ಕಡಿಮೆ ಆಗುವುದಿಲ್ಲ ಎಂದು ಜಿಗುಪ್ಸೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.