ಗದಗ : ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಅವರ 78ನೇ ಪುಣ್ಯಸ್ಮರಣೆ ಮತ್ತು ಡಾ. ಪಂಡಿತ ಪುಟ್ಟರಾಜ ಗವಾಯಿ ಅವರ ಸ್ಮರಣಾರ್ಥ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಜಾತ್ರೆಯ ಅಂಗವಾಗಿ ಸವಿತಾ ಸಮಾಜದ ವತಿಯಿಂದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ವ್ಯಾಸಂಗ ಮಾಡುತ್ತಿರುವ ದಿವ್ಯಾಂಗ ಅನಾಥ ಮಕ್ಕಳಿಗೆ ಉಚಿತ ಕ್ಷೌರ ಸೇವೆ ಮಾಡಿದರು.
20 ವರ್ಷಗಳಿಂದ ಜರುಗುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಈ ಉಚಿತ ಕ್ಷೌರ ಸೇವೆ ಮಾಡಲಾಗುತ್ತಿದೆ. ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳನ್ನು ನಡೆದಾಡುವ ದೇವರಂತೆ ಕಾಣುತ್ತಿದ್ದೆವು. ಅವರು ದಿವ್ಯಾಂಗ ಮತ್ತು ಅನಾಥ ಮಕ್ಕಳನ್ನು ಸಲುಹಿ, ಈ ನಾಡಿಗೆ ಮತ್ತು ದೇಶಕ್ಕೆ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿದವರು. ಹೀಗಾಗಿ, ಇಂತಹ ಒಂದು ಪುಣ್ಯಾಶ್ರಮದಲ್ಲಿ ನಮ್ಮದೊಂದು ಅಳಿಲು ಸೇವೆ ಇರಲಿ ಅಂತಾ ಭಾವಿಸಿ ಈ ಸೇವೆ ಮಾಡುತ್ತಿದ್ದೇವೆಂದು ಸವಿತಾ ಸಮಾಜದ ಸದಸ್ಯರು ತಿಳಿಸಿದರು.
ಇದನ್ನೂ ಓದಿ: ಅನುದಾನಿತ ಶಾಲೆಯ ವೇತನ ಬಿಡುಗಡೆಗೆ ಲಂಚ: ಎಸಿಬಿ ಬಲೆಗೆ ಬಿದ್ದ ಅಫ್ಜಲಪುರ ಬಿಇಒ
ಸವಿತಾ ಸಮಾಜದವರು ಈವರೆಗೂ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಕ್ಷೌರ ಮಾಡಿದ್ದಾರೆ. ಈ ವರ್ಷ ಸುಮಾರು 20ಕ್ಕೂ ಹೆಚ್ಚು ಕ್ಷೌರಿಕರು ತಮ್ಮ ದಿನನಿತ್ಯದ ಕಸುಬು ತೊರೆದು ಆಶ್ರಮಕ್ಕೆ ಬಂದು ಉಚಿತ ಸೇವೆಗೈದಿದ್ದಾರೆ.