ETV Bharat / state

ಕಾರ್ಮಿಕ ಕಾರ್ಡ್ ಹೆಸರಲ್ಲಿ ಸಾವಿರಾರು ರೂ. ವಸೂಲಿ ಆರೋಪ: ಗದಗದಲ್ಲಿ ವ್ಯಕ್ತಿಗೆ ಥಳಿತ

ಕಾರ್ಮಿಕ ಕಾರ್ಡ್​ ಮಾಡಿಕೊಡುವುದಾಗಿ ಹೇಳಿ ಸ್ವರದ ಎಂಟರ್​ರ್ಪ್ರೈಸ್ ಡೆವಲೆಪ್ ಲೈವ್ಲಿವುಡ್ ಫರ್ಮ್ ಸಂಸ್ಥೆ ನಿರ್ದೇಶಕ ಎಸ್. ಕುಮಾರ್ ವಂಚನೆ ಮಾಡಿದ್ದಾನೆಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೇ ಇಂದು ಆ ವ್ಯಕ್ತಿಗೆ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

Fraud case in the name of labor card in gadaga
ಕಾರ್ಮಿಕ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿ ಸಾವಿರಾರು ರೂ. ವಸೂಲಿ ಮಾಡಿದ ಆರೋಪ, ವ್ಯಕ್ತಿಗೆ ಥಳಿತ!
author img

By

Published : Jul 11, 2021, 11:57 AM IST

Updated : Jul 11, 2021, 12:37 PM IST

ಗದಗ : ಕಾರ್ಮಿಕರ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿ ವ್ಯಕ್ತಿವೋರ್ವ ಹಣ ವಸೂಲಿ ಮಾಡಿದ್ದಾನೆಂದು ಜನರು ಆತನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗದ ಮಸಾರಿ ಪ್ರದೇಶದಲ್ಲಿ ನಡೆದಿದೆ. ಇಲ್ಲಿ ಚಿತ್ರದುರ್ಗ ಮೂಲದ ಖಾಸಗಿ ಸಂಸ್ಥೆ ಕಾರ್ಯ ನಿರ್ವಹಣೆ ಮಾಡುತ್ತಿದೆ. ಈ ಸಂಸ್ಥೆಯ ನಿರ್ದೇಶಕ ಎಸ್. ಕುಮಾರ್ ಎನ್ನುವಾತನೇ ವಂಚಕ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಗದಗ ತಾಲೂಕು, ಶಿರಹಟ್ಟಿ ಲಕ್ಷ್ಮೇಶ್ವರದ ಹಲವು ಹಳ್ಳಿಗಳ ಸಾವಿರಾರು ಮಹಿಳೆಯರಿಗೆ, ಸರ್ಕಾರ ನೀಡುವ ಕಾರ್ಮಿಕರ ಕಾರ್ಡ್ ಮಾಡೋದಾಗಿ ಹೇಳಿ ವಂಚನೆ ಮಾಡಿದ್ದಾನೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಒಂದು ಕಾರ್ಡ್​ಗೆ 1700 ರೂಪಾಯಿ ಪಡೆದು, ಕಾರ್ಮಿಕ ಕಾರ್ಡ್ ನೀಡದೆ ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ಹೀಗಾಗಿಯೇ ಕದಡಿ ಗ್ರಾಮ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದ ನೂರಾರು ಮಹಿಳೆಯರು ಹಾಗೂ ಕಾರ್ಮಿಕರು ಆಗಮಿಸಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ವಂಚನೆ ಆರೋಪದ ಮೇಲೆ ವ್ಯಕ್ತಿಗೆ ಥಳಿತ

ವಿಶ್ವ ಸಂಸ್ಥೆಯಿಂದ ನಿಮಗೆ ಹೆಚ್ಚಿನ ಹಣ ಬರುತ್ತದೆ ಅಂತಾ ಹೇಳಿ ಗ್ರಾಮೀಣ ಭಾಗದ ಜನರ ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡಿದ್ದಾನೆ. ನಿಮ್ಮ ಮಕ್ಕಳಿಗೆ ಶಿಕ್ಷಣ, ಮದುವೆ ಕಾರ್ಯಕ್ಕೆ ಹಣ ಹಾಗೂ ಅನಾರೋಗ್ಯ ವೇಳೆ ಹಣ ಬರುತ್ತದೆ ಎಂದು ಹೇಳಿದ್ದಾನೆ. ಇವರ ಬಣ್ಣ ಬಣ್ಣದ ಮಾತುಗಳನ್ನು ನಂಬಿ ಗದಗ ಜಿಲ್ಲೆಯ ಸಾವಿರಾರು ಬಡ ಜನರು 17 ನೂರು ರೂಪಾಯಿ ಹಣ ನೀಡಿದ್ದಾರೆ. ಆದರೆ ಈವರೆಗೆ ಸಮರ್ಪಕವಾಗಿ ಕಾರ್ಮಿಕ ಇಲಾಖೆ ಕಾರ್ಡ್ ಬಂದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೀಕರ ಅಪಘಾತ: ನಾಗಾಲ್ಯಾಂಡ್ ಗಡಿಯಲ್ಲಿ ಬೆಳಗಾವಿ ಯೋಧ ವಿಧಿವಶ

ಅದರಲ್ಲೂ ಈಗ ಸರ್ಕಾರ ಕಾರ್ಮಿಕ ಕಾರ್ಡ್ ಇರುವ ಜನರಿಗೆ ಆಹಾರ ಕಿಟ್ ಸೇರಿದಂತೆ ಕೆಲ ಸೌಲಭ್ಯ ನೀಡುತ್ತಿದೆ ವಿತರಣೆ ಮಾಡುತ್ತಿದೆ‌. ಹಾಗಾಗಿ ನಮಗೂ ಸರ್ಕಾರದ ಸೌಕರ್ಯ ಸಿಗುತ್ತೆ ಅಂತ ಬಡವರು ಹಣವನ್ನು ನೀಡಿದ್ದಾರೆ. ಆದರೆ ಕಾರ್ಮಿಕ ಕಾರ್ಡ್ ಮಾತ್ರ ಬಂದಿಲ್ಲ. ಕಾರ್ಮಿಕ ಕಾರ್ಡ್ ಬರದಿದ್ದಾಗ ಗ್ರಾಮೀಣ ಭಾಗದ ಜನ್ರು ಅವರ ಬಳಿ ಬಂದು ಕೇಳಿದ್ದಾರೆ. ಸಮರ್ಪಕವಾದ ಉತ್ತರ ಬರದಿದ್ದಾಗ ಕುಮಾರ್​​ನನ್ನು ಥಳಿಸಿದ್ದಾರೆ.

ಈ ವೇಳೆ ಬಡಾವಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಜನರಿಂದ ಕುಮಾರ್ನನ್ನು ರಕ್ಷಿಸಿ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ. ಮಹಿಳೆಯರು, ಕಾರ್ಮಿಕರು ಹಾಗೂ ಸಂಘಟನೆ ಕಾರ್ಯಕರ್ತರು ನ್ಯಾಯಕ್ಕಾಗಿ ಪಟ್ಟು ಹಿಡಿದಿದ್ದಾರೆ.

Last Updated : Jul 11, 2021, 12:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.