ETV Bharat / state

ಗದಗದಲ್ಲಿ ‌ಮತ್ತೆ ನಾಲ್ಕು ಜನರಿಗೆ ಕೊರೊನಾ: ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ - ಗದಗ ಜಿಲ್ಲಾ ಸುದ್ದಿ

ರಾಜ್ಯದಲ್ಲಿ ಕೊರೊನಾ ಸೋಂಕಿತ ಸಂಖ್ಯೆ ದ್ವಿಗುಣವಾಗುತ್ತಿದ್ದು, ಗದಗ ಜಿಲ್ಲೆಯಲ್ಲಿಂದು ಒಂದು ವರ್ಷದ ಮಗು ಸೇರಿ ಒಟ್ಟು 4 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

four-corona-cases-found-in-gadag-district
ಜಿಲ್ಲಾಧಿಕಾರಿ ಎಂ ಸುಂದರೇಶ್ ಬಾಬು
author img

By

Published : Jul 4, 2020, 10:42 PM IST

ಗದಗ: ಜಿಲ್ಲೆಯಲ್ಲಿ ಇಂದು ಒಂದು ವರ್ಷದ ಮಗು ಸೇರಿ ನಾಲ್ವರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 203ಕ್ಕೆ ಏರಿಕೆಯಾಗಿದೆ.

ನರಗುಂದ ಗಾಡಿ ಓಣಿ ನಿವಾಸಿ 39 ವರ್ಷದ ಪುರುಷ ರೋಗಿ-15320 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 1 ವರ್ಷದ ಬಾಲಕಿ ರೋಗಿ-19886 ಹಾಗೂ 4 ವರ್ಷದ ಬಾಲಕಿ ರೋಗಿ-19887ಗೆ ಸೋಂಕು ದೃಢವಾಗಿದೆ. ಹಾವೇರಿ ಜಿಲ್ಲೆಯಿಂದ ಜೂನ್ 26ರಂದು ಜಿಲ್ಲೆಗೆ ಆಗಮಿಸಿದ್ದ ರೋಣ ತಾಲೂಕಿನ ಬೆಳವಣಕಿ ಗ್ರಾಮದ 38 ವರ್ಷದ ಪುರುಷ ರೋಗಿ-19888 ಇವರಿಗೆ ಸೋಂಕು ದೃಢವಾಗಿದೆ.

ಗದಗ-ಬೆಟಗೇರಿಯ ನರಸಾಪುರದ ರಂಗಪ್ಪಜ್ಜ ಮಠದ ಹತ್ತಿರದ ನಿವಾಸಿ 60 ವರ್ಷದ ಮಹಿಳೆ ರೋಗಿ-18271 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 73 ವರ್ಷದ ಪುರುಷ ರೋಗಿ-19886 ಇವರಿಗೆ ಸೋಂಕು ದೃಢಪಟ್ಟಿದೆ.

‌ಸೋಂಕಿತರ‌ ಪೈಕಿ ಈಗಾಗಲೇ 84 ಜನ ಗುಣಮುಖರಾಗಿದ್ದಾರೆ. ನಾಲ್ಕು ಜನ ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 115 ಕೊವಿಡ್-19 ಸೋಂಕಿನ ಸಕ್ರಿಯ ಪ್ರಕರಣಗಳಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.