ETV Bharat / state

ಬಿತ್ತನೆಗೆ ತೆರಳಿದ್ದ ರೈತ... ಮರದಡಿ ನಿಂತು ಮೊಬೈಲ್​ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲಿಗೆ ಬಲಿ - ಸಿಡಿಲು ಬಡಿದು ರೈತ ಸಾವು

ಸಿಡಿಲು ಬಡಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ, ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ನಡೆದಿದೆ.

Farmer's death by lightning
ಬಿತ್ತನೆ ಮಾಡುವ ವೇಳೆ ಸಿಡಿಲು ಬಡಿದು ರೈತ ಸಾವು
author img

By

Published : Jul 20, 2020, 8:34 PM IST

ಗದಗ: ಜಮೀನಿನಲ್ಲಿ ಬಿತ್ತನೆ ಕಾರ್ಯ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ, ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ನಡೆದಿದೆ.

34 ವರ್ಷದ ಕೃಷ್ಣಪ್ಪ ಭಜಮ್ಮನವರ್ ಎಂಬಾತ ಮೃತ ರೈತ. ನಾಲ್ಕು ಜನ ಸೇರಿಕೊಂಡು ಜಮೀನಿನಲ್ಲಿ ಮೆಣಸಿನ ಬೀಜ ಬಿತ್ತನೆ ಮಾಡುವಾಗ ಈ ಅವಘಡ ಸಂಭವಿಸಿದೆ.

ಮಳೆ ಬಂದ ಹಿನ್ನೆಲೆ ಇತರೆ 3 ಜನ ಬೇರೆ ಮರದಡಿ ನಿಂತುಕೊಂಡಿದ್ದರು. ಆದ್ರೆ ಕೃಷ್ಣಪ್ಪ ಒಬ್ಬನೇ ಮತ್ತೊಂದು ಮರದಡಿ ಮೊಬೈಲ್​ನಲ್ಲಿ ಮಾತನಾಡುತ್ತಾ ನಿಂತಿದ್ದ ವೇಳೆ ಸಿಡಿಲು ಅಪ್ಪಳಿಸಿದೆ.

ಮಳೆ ಬರುವ ಮುನ್ನ ಜೊತೆಗಿದ್ದ ಕೃಷ್ಣಪ್ಪ‌ ಮಳೆ ನಿಂತ ಮೇಲೆ ಆತನ ಜೀವವೇ ನಿಂತು ಹೋಗಿದ್ದು, ಜೊತೆಗಿದ್ದವರಿಗೂ ಒಂದು ರೀತಿ ಆಘಾತ ಉಂಟಾಗಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಗ್ರಾಮ‌ ಲೆಕ್ಕಾಧಿಕಾರಿ, ತಹಶೀಲ್ದಾರ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.