ETV Bharat / state

ದರ್ಶನ್​ಗೆ ಟಗರು ಗಿಫ್ಟ್ ನೀಡಿದ ಗದಗ ಅಭಿಮಾನಿ ಶಂಭು ಗಡಗಿ - fan gifted Sheep to actor darshan

ದರ್ಶನ್ ಅಪ್ಪಟ ಅಭಿಮಾನಿ ಶಂಭು ಗಡಗಿ ಎಂಬಾತ ತಾನು ಸುಮಾರು ಎರಡೂವರೆ ವರ್ಷಗಳಿಂದ ಅತೀ ಪ್ರೀತಿಯಿಂದ ಸಾಕಿದ್ದ ಟಗರನ್ನು ತನ್ನ ನೆಚ್ಚಿನ ನಟನಿಗೆ ಕೊಡುವುದರ ಮೂಲಕ ಅಭಿಮಾನ ಮೆರೆದಿದ್ದಾನೆ.

Darsha
ಅಭಿಮಾನಿ ಶಂಭು ಗಡಗಿ
author img

By

Published : Mar 1, 2021, 7:53 PM IST

ಗದಗ: ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ಗದಗದ ಅಭಿಮಾನಿಯೊಬ್ಬ ತಾನು ಸಾಕಿ ಬೆಳೆಸಿದ ಮೆಚ್ಚಿನ ಟಗರನ್ನು ಗಿಫ್ಟ್ ಆಗಿ ನೀಡಿದ್ದಾನೆ.

ಗದಗ ತಾಲೂಕಿನ ಕಣವಿ ಹೊಸೂರಿನ ಯುವಕ ಶಂಭು ಗಡಗಿ ಎಂಬಾತನೇ ಟಗರು ಗಿಫ್ಟ್ ನೀಡಿದ ಯುವಕ. ನಿನ್ನೆ ಹುಬ್ಬಳ್ಳಿಯಲ್ಲಿ ರಾಬರ್ಟ್‌ ಸಿನಿಮಾದ ಪ್ರಿ ಲಾಂಚಿಂಗ್ ಮುಗಿಸಿ ಬೆಂಗಳೂರಿನತ್ತ ಮರಳುತ್ತಿದ್ದ ನಟ ದರ್ಶನ್, ಅಭಿಮಾನಿಯನ್ನು ನೋಡಿದ ತಕ್ಷಣ ಕಾರಿನಿಂದ ಇಳಿದು ಆತನ ಉಡುಗೊರೆಯನ್ನು ಖುಷಿಯಿಂದ ಸ್ವೀಕರಿಸಿದ್ದಾರೆ.

ದರ್ಶನ್​ಗೆ ಟಗರು ಗಿಫ್ಟ್ ನೀಡಿದ ಗದಗ ಅಭಿಮಾನಿ ಶಂಭು ಗಡಗಿ

ಶಂಭು ಗದಗನ ಶಿರಸಂಗಿ ಮೊಬೈಲ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದು, ದರ್ಶನ್ ಅವರ ಅಪ್ಪಟ ಅಭಿಮಾನಿ. ಸುಮಾರು ಎರಡೂವರೆ ವರ್ಷಗಳಿಂದ ತಾನು ಅತೀ ಪ್ರೀತಿಯಿಂದ ಸಾಕಿದ್ದ ಟಗರನ್ನು ದರ್ಶನ್​ಗೆ ಕೊಡುವುದರ ಮೂಲಕ ಅಭಿಮಾನ ಮೆರೆದಿದ್ದಾನೆ. ಆದರೆ ಸದ್ಯ ದರ್ಶನ್ ಟಗರನ್ನು ತೆಗೆದುಕೊಂಡು ಹೋಗಿಲ್ಲ. ಆದರೆ ಅಭಿಮಾನಿ ಶಂಭುಗೆ ಮೈಸೂರಿನ ತಮ್ಮ ಫಾರ್ಮ್ ಹೌಸ್​ಗೆ ಆಗಮಿಸುವಂತೆ ಆಹ್ವಾನ ನೀಡಿದ್ದಾರಂತೆ.

ತಾವು ಒಂದು ವಾಹನ ಕಳಿಸುವುದಾಗಿ ತಿಳಿಸಿರುವ ಅವರು, ವಾಹನದಲ್ಲಿ ಟಗರು ಮತ್ತು ನೀನು ಇಬ್ಬರೂ ಬನ್ನಿ ಅಂತ ಆತನ ಮೊಬೈಲ್ ನಂಬರ್ ತೆಗೆದುಕೊಂಡು ಹೋಗಿದ್ದಾರೆ. ಸಿನಿಮಾದಲ್ಲಿ ಬ್ಯೂಸಿ ಶೇಡ್ಯೂಲ್​ನಲ್ಲಿ ಇರೋದ್ರಿಂದ ಸದ್ಯ ಟಗರನ್ನು ಫಾರ್ಮ ಹೌಸ್​ಗೆ ತೆಗೆದುಕೊಂಡು ಹೋಗುವುದಕ್ಕೆ ಆಗಿಲ್ಲ. ಹಾಗಾಗಿ ನೀನೆ ಬಾ ಅಂತ ತಿಳಿಸಿದ್ದಾರೆ ಎಂದು ಖುಷಿಯಿಂದ ಶಂಭು ಹೇಳಿಕೊಂಡಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.