ETV Bharat / state

ಸಚಿನ್ ಪಾಟೀಲ್​​-ಅನಿಲ್​​ ಮೆಣಸಿನಕಾಯಿ ನಡುವೆ ಮುಂದುವರಿದ ಫೇಸ್​ಬುಕ್ ಫೈಟ್!

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ತಮ್ಮ ಅಭ್ಯರ್ಥಿಗಳ ಪರ ಮತ ಕೇಳುವ ನೆಪದಲ್ಲಿ ಪಕ್ಷದ ಮುಖಂಡರು ಪರಸ್ಪರ ವಾಗ್ವಾದಕ್ಕೆ ಮುಂದಾಗ್ತಿದ್ದಾರೆ. ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಹಾಗೂ ಕಾಂಗ್ರೆಸ್​ನ ಸಚಿನ್ ಪಾಟೀಲ್ ಫೇಸ್​ಬುಕ್​ನಲ್ಲಿ ವಾಕ್ ಸಮರ ನಡೆಸಿದ್ದಾರೆ.

author img

By

Published : Apr 8, 2019, 11:30 PM IST

ಫೇಸ್ಬುಕ್ ಫೈಟ್

ಗದಗ : ಜಿಲ್ಲೆಯ ಮುಖಂಡರು ಹಾವೇರಿ ಲೋಕಸಭೆಗೆ ಸ್ಪರ್ಧಿಸುವ ತಮ್ಮ ಅಭ್ಯರ್ಥಿಗಳ ಗೆಲುವಿನ ನಿರೀಕ್ಷೆ ಇಟ್ಕೊಂಡು ಫೇಸ್ ಟು ಫೇಸ್ ಫೈಟ್ ನಡೆಸದೆ ಫೇಸ್​​ಬುಕ್​ನಲ್ಲಿ ಟಾಕ್-ವಾರ್ ನಡೆಸಿದ್ದಾರೆ‌.

ಏಲಕ್ಕಿ ನಾಡು ಎಂದೇ ಫೇಮಸ್ ಆಗಿರುವ ಹಾವೇರಿ ಲೋಕಸಭಾ ಚುನಾವಣಾ ಕಾವು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಈ ಬಾರಿ ಬಿಜೆಪಿಯ ಸಂಸದ ಶಿವಕುಮಾರ್ ಉದಾಸಿ ಎದುರಾಳಿಯಾಗಿರೋ ಕಾಂಗ್ರೇಸ್​ನ ಡಿ ಆರ್ ಪಾಟೀಲ್, ಹೆಚ್ ಕೆ ಪಾಟೀಲ್ ಸಹೋದರರಾಗಿದ್ದರಿಂದ ಈ ಕಾವಿಗೆ ಮತ್ತಷ್ಟು ಪುಷ್ಟಿ ಕೊಟ್ಟಂತಾಗಿದೆ.

ಬಿಜೆಪಿ ಅಭ್ಯರ್ಥಿ ಶಿವಕುಮಾರ್​ಗೆ ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಡಿ ಆರ್ ಪಾಟೀಲ್ ಪುತ್ರ ಸಚಿನ್ ಪಾಟೀಲ್ ಸವಾಲೊಡ್ಡಿದ್ದೇ ತಡ, ಇತ್ತ ಬಿಜೆಪಿಯಿಂದ ಈ ಹಿಂದೆ ಗದಗ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ ಕೆ ಪಾಟೀಲ್ ವಿರುದ್ಧ ಸ್ಪರ್ಧೆ ಮಾಡಿ, ಸೋಲು ಕಂಡಿರುವ ಅನಿಲ್ ಮೆಣಸಿನಕಾಯಿ, ಸಚಿನ್ ಗೌಡ ಪಾಟೀಲ್​ರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧವಾದ್ರು. ಸವಾಲು ಕುರಿತಾದ ವಾಗ್ದಾಳಿ ದಿನೇ ದಿನೇ ಬೆಳೆಯುತ್ತಾ ಹೋದ್ರೂ, ಈವರೆಗೂ ಇಬ್ಬರು ಸವಾಲಿಗಾಗಿ ವೇದಿಕೆಯನ್ನ ಹುಟ್ಟುಹಾಕಿಲ್ಲ. ಇನ್ನು ಮಾಧ್ಯಮಗಳ ಮುಂದೆಯಷ್ಟೇ ಹಾಕುತ್ತಿದ್ದ ಸವಾಲನ್ನ ಇದೀಗ ಫೇಸ್​ಬುಕ್​ವರೆಗೂ ಮುಂದುವರಿಸಿದ್ದಾರೆ.

ಇನ್ನು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ಸಚಿನ್ ಪಾಟೀಲ್ ಮೇಲೆ ಮಾಡಿದ ಆರೋಪಕ್ಕೆ ಕ್ಲಾರಿಫಿಕೇಷನ್ ನೀಡುವ ನೆಪದಲ್ಲಿ ಕಾಂಗ್ರೆಸ್​ನ ಸಚಿನ್ ಪಾಟೀಲ್ ಮತ್ತೆ ಮೆಣಸಿನಕಾಯಿ ವಿರುದ್ಧ ಫೇಸ್​ಬುಕ್​​ನಲ್ಲಿ ವಾಕ್​ ಸಮರ ನಡೆಸಿದ್ದಾರೆ. ಅಲ್ಲದೆ ಬಹಿರಂಗವಾಗಿ ಸವಾಲು ನಡೆಯಲಿ, ಒಟ್ಟಿಗೆ ಪ್ರಚಾರವಾಗಲಿ. ಗೆಲುವು ಯಾರಿಗೆ ಅಂತಾ ನೋಡೋಣ ಎಂದಿದ್ದಾರೆ. ಮೆಣಸಿನಕಾಯಿ ಕಾಂಗ್ರೆಸ್​ ಕಾರ್ಯಕರ್ತರಿಗೆ ಗೂಂಡಾಗಳು ಅಂತಾ ಕರೆಯುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಹಾಗೆಲ್ಲ ಅಂದ್ರೆ ನಾನು ಸುಮ್ಮನಿರೋಕ್ಕಾಗಲ್ಲ. ವಾರ್ನಿಂಗ್ ಮಾಡ್ಬೇಕಾಗತ್ತೆ ಅಂತಾ ಫೇಸ್​ಬುಕ್ ವಾರ್ ಮುಂದುವರೆಸಿದ್ದಾರೆ.

ಒಟ್ಟಿನಲ್ಲಿ ಈ ಇಬ್ಬರು ಮುಖಂಡರು ಹೀಗೇ ಫೇಸ್​ಬುಕ್​ ಯುದ್ಧ ನಡೆಸುತ್ತಿರೋ ಪರಿಣಾಮ ಗದಗ ಜಿಲ್ಲೆಯ ಜನರಲ್ಲಿ ಅಸಮಾಧಾನ ಹುಟ್ಟಿದ್ದಂತೂ ಸುಳ್ಳಲ್ಲ. ಸದ್ಯ ಚುನಾವಣೆಗಾಗಿ ಎಸೆಯೋ ಸವಾಲುಗಳು ಅಭಿವೃದ್ಧಿಗಾಗಿ ಆಗಿದ್ದರೆ, ಗದಗ ಜಿಲ್ಲೆಯಾದರೂ ಪರಿವರ್ತನೆ ಆಗ್ತಿತ್ತು ಅನ್ನೋದು ರಾಜಕೀಯ ಅನುಭವಸ್ಥರ ಮಾತಾಗಿದೆ.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.