ಗದಗ: ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಗಳ ಮಧ್ಯೆ ಬೆಳೆದಿದ್ದ ಸುಮಾರು 16 ಸಾವಿರ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್. ಬೇಲೇರಿ ಗ್ರಾಮದ ಶಿವನಗೌಡ ಕೃಷ್ಣೆಗೌಡ ಎಂಬಾತ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಅಬಕಾರಿ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ರೆಡ್ಡಿ ನೇತೃತ್ವದ ತಂಡ ದಾಳಿ ಮಾಡಿದ್ದು, ಆರೋಪಿ ಶಿವನಗೌಡ ಪರಾರಿಯಾಗಿದ್ದಾನೆ.
ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಶ್ರೀಶೈಲ ಅಕ್ಕಿ, ಹೆಚ್.ಪಿ.ನಾಯಕ್, ಸಿಬ್ಬಂದಿ ಬಿ.ಎಂ.ನಿಡಗುಂದಿ, ಬಸವರಾಜ್ ಬಿರಾದಾರ್, ಲೋಹಿತ್ ಮೇಟಿ, ಪರಶುರಾಮ ರಾಥೋಡ್, ಚಂದ್ರು ರಾಥೋಡ್, ಗುರುರಾಜ್, ಚಾಲಕರಾದ ಶೇಖಪ್ಪ, ಮಾಬುಸಾಬ್ ಇದ್ದರು.