ಗದಗ: ಕಾಂಗ್ರೆಸ್ ವಿಸರ್ಜನೆ ಮಾಡಿ, ಇಲ್ಲ ಅಂದ್ರೆ ಮೋದಿ ಅನ್ನೋ ಸುನಾಮಿ ಅಲೆಗೆ ಕಾಂಗ್ರೆಸ್ ಸಂಪೂರ್ಣ ಕೊಚ್ಚಿ ಹೋಗುತ್ತೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.
ನಗರದಲ್ಲಿ ನೂತನ ಸಂಸದ ಶಿವಕುಮಾರ್ ಉದಾಸಿಯವರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಂದು ಸ್ವಾತಂತ್ರ್ಯ ನಂತರ ಮಹಾತ್ಮ ಗಾಂಧಿಜೀಯವರು ಕಾಂಗ್ರೆಸ್ ವಿಸರ್ಜನೆ ಮಾಡಿ ಅಂತಾ ಸಲಹೆ ನೀಡಿದ್ದರು. ಆಗ ನೆಹರು ಅವರು ಒಪ್ಪದೇ 30-40 ವರ್ಷ ಅಧಿಕಾರದ ರುಚಿ ಅನುಭವಿಸಿದರು. ಈಗಲಾದರೂ ಕಾಂಗ್ರೆಸ್ ಗೌರವಯುತವಾಗಿ ಪಕ್ಷ ವಿಸರ್ಜನೆ ಮಾಡಲಿ. ಇಲ್ಲ ಅಂದ್ರೆ ತಂತಾನೇ ಮೋದಿ ಸುನಾಮಿಗೆ ಸಂಪೂರ್ಣ ಕೊಚ್ಚಿ ಹೋಗುವುದರಲ್ಲಿ ಸಂದೇಹವೇ ಇಲ್ಲ ಎಂದರು.
ಈ ಕೃತಜ್ಞತಾ ಸಮಾರಂಭದಲ್ಲಿ ಶಾಸಕ ಬಸವರಾಜ್ ಬೊಮ್ಮಾಯಿ, ಸಿಸಿ ಪಾಟೀಲ್, ಕಳಕಪ್ಪ ಬಂಡಿ, ಅನಿಲ್ ಮೆಣಸಿನಕಾಯಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.