ETV Bharat / state

ಕುಡಿದು ಅಡ್ಡಾದಿಡ್ಡಿ ಆ್ಯಂಬ್ಯುಲೆನ್ಸ್ ಚಲಾಯಿಸಿ ಕಾರ್​ಗೆ ಡಿಕ್ಕಿ ಹೊಡೆದ ಚಾಲಕ - ಆ್ಯಂಬ್ಯುಲೆನ್ಸ್​ ಡ್ರೈವರ್​

ಕಂಠಪೂರ್ತಿ ಕುಡಿದು, ಅಮಲಿನಲ್ಲಿದ್ದ ಆ್ಯಂಬ್ಯುಲೆನ್ಸ್ ಚಲಾಯಿಸಿದ ಚಾಲಕನೋರ್ವ ಕಾರ್​ವೊಂದಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಗದಗದಲ್ಲಿ ನಡೆದಿದೆ.

drunken ambulance driver
drunken ambulance driver
author img

By

Published : Jul 17, 2021, 12:24 AM IST

Updated : Jul 17, 2021, 6:50 AM IST

ಗದಗ : ಕಂಠಪೂರ್ತಿ ಕುಡಿದ ಅಮಲಿನಲ್ಲಿ ಡ್ರೈವರ್​ನೋರ್ವ ಅಡ್ಡಾದಿಡ್ಡಿ ಆ್ಯಂಬ್ಯುಲೆನ್ಸ್​ ​ಚಲಾಯಿಸಿ ಕಾರ್​ವೊಂದಕ್ಕೆ ಡಿಕ್ಕಿ ಹೊಡಿದಿದ್ದಾನೆ. ಪರಿಣಾಮ ಕಾರಿನಲ್ಲಿದ್ದ ಡ್ರೈವರ್​ ಗಾಯಗೊಂಡಿದ್ದಾನೆ. ಘಟನೆಯಿಂದ ಸ್ಥಳೀಯರು ಸೇರಿಕೊಂಡು ಆ್ಯಂಬ್ಯುಲೆನ್ಸ್​​ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗದಗನಲ್ಲಿ ನಡೆದಿದೆ.

ಕುಡಿದು ಅಡ್ಡಾದಿಡ್ಡಿ ಆ್ಯಂಬ್ಯುಲೆನ್ಸ್ ಚಲಾಯಿಸಿ ಕಾರ್​ಗೆ ಡಿಕ್ಕಿ ಹೊಡೆದ ಚಾಲಕ

ನಗರದ ಮಲ್ಲಸಮುದ್ರ ಬಳಿ ಈ ಘಟನೆ ನಡೆದಿದ್ದು, ಕಾರು ಚಾಲಕ ಗೋವಿಂದಪ್ಪ ಲಮಾಣಿಗೆ ಗಂಭೀರ ಗಾಯವಾಗಿದೆ. ಶಿರಹಟ್ಟಿ ಕಡೆಗೆ ಹೊರಟಿದ್ದ ಸಂದರ್ಭದಲ್ಲಿ ಆ್ಯಂಬ್ಯುಲೆನ್ಸ್​ ಅಡ್ಡಾದಿಡ್ಡಿ ಚಲಾವಣೆಗೊಂಡಿದ್ದಕ್ಕಾಗಿ ಈ ಅವಘಡ ಸಂಭವಿಸಿದೆ. ಚಾಲಕ ವಿಶ್ವನಾಥ್​ ಕುಡಿದು ಚಲಾಯಿಸಿಕೊಂಡು ಬಂದಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿರಿ: ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್​ಗೆ ನಿಷೇಧ... ಬಕ್ರೀದ್​ ಹಬ್ಬ ಆಚರಣೆಗೆ ಗೈಡ್​ಲೈನ್ಸ್​​ ಪ್ರಕಟ

ಆ್ಯಂಬ್ಯುಲೆನ್ಸ್​​ನಲ್ಲಿದ್ದ ಆತನ ಇನ್ನೋರ್ವ ಸ್ನೇಹಿತ ಕೂಡ ಕುಡಿದು ಡ್ರೈವ್ ಮಾಡಿದ್ದಾನೆಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಹೈವೇ ಪೊಲೀಸರು ಆ್ಯಂಬ್ಯುಲೆನ್ಸ್ ಚಾಲಕನಿಗೆ ವಶಕ್ಕೆ ಪಡೆದು ಗ್ರಾಮೀಣ ಠಾಣೆಗೆ ಕರೆದೊಯ್ದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಕಾರು ಚಾಲಕ ಗೋವಿಂದಪ್ಪನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಈ ಅಂಬ್ಯುಲೆನ್ಸ್​​ ಶಿರಹಟ್ಟಿ ತಾಲೂಕು ಆಸ್ಪತ್ರೆಗೆ ಸೇರಿದ್ದಾಗಿದ್ದು, ಚಾಲಕ ವಿಶ್ವನಾಥ್ ಶಿರಹಟ್ಟಿ ಪಟ್ಟಣದ ನಿವಾಸಿಯಾಗಿದ್ದಾನೆ.

Last Updated : Jul 17, 2021, 6:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.