ಗದಗ: ರಭಸವಾಗಿ ನೀರು ಹರಿಯುತ್ತಿದ್ದ ಸೇತುವೆ ಮೇಲೆ ಚಾಲಕ ಬಸ್ ಚಲಾಯಿಸಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿಯ ಬೆಣ್ಣಿಹಳ್ಳದಲ್ಲಿ ನಡೆದಿದೆ.
ತುಂಬಿ ಹರಿಯುತ್ತಿರುವ ಬೆಣ್ಣಿಹಳ್ಳದಲ್ಲಿ ಬಸ್ ಚಲಿಸುತ್ತಿರುವಾಗ ಸೇತುವೆ ಮಧ್ಯೆ ನಿಂತು ನೀರಿನ ರಭಸಕ್ಕೆ ಬಸ್ ಹಳ್ಳದತ್ತ ವಾಲಿದೆ. ಇದರಿಂದ ಒಳಗೂ ಕೂರಲಾಗದೆ ಹೊರಗೂ ಬರಲಾಗದೇ ಪ್ರಯಾಣಿಕರು ಪರದಾಟ ಅನುಭವಿಸಿದ್ದಾರೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೆ ಪ್ರಯಾಣಿಕರು ಬಚಾವ್ ಆಗಿದ್ದಾರೆ.
ರೋಣದಿಂದ ನರಗುಂದ ಕಡೆ ಹೋಗುತ್ತಿದ್ದ ಸರ್ಕಾರಿ ಬಸ್ ಇದಾಗಿದ್ದು, ಚಾಲಕ ತನ್ನ ಹುಚ್ಚು ಸಾಹಸಕ್ಕೆ ಮುಂದಾಗಿದ್ದಾನೆ. ಸ್ಥಳೀಯರು ಮೊಬೈಲ್ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿ ಹರಿಬಿಟ್ಟಿದ್ದಾರೆ. ಚಾಲಕನ ಬೇಜವಾಬ್ದಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.