ETV Bharat / state

ಡಿ.ಕೆ.ಶಿವಕುಮಾರ್​​​ ಪೇಪರ್​​ ಟೈಗರ್​​​​​​: ಈಶ್ವರಪ್ಪ ವ್ಯಂಗ್ಯ

author img

By

Published : Jul 30, 2020, 1:29 PM IST

ಪಠ್ಯಕ್ರಮದಲ್ಲಿ ಟಿಪ್ಪು ಪಾಠ ಕೈ ಬಿಟ್ಟ ವಿಚಾರವಾಗಿ ಗದಗನಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

Minister K.S. Ishwarappa
ಸಚಿವ ಕೆ.ಎಸ್. ಈಶ್ವರಪ್ಪ

ಗದಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇವಲ ಪೇಪರ್ ಟೈಗರ್ ಮಾತ್ರ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಸಚಿವ ಕೆ.ಎಸ್​.ಈಶ್ವರಪ್ಪ

ಪಠ್ಯಕ್ರಮದಲ್ಲಿ ಟಿಪ್ಪು ಪಾಠ ಕೈ ಬಿಟ್ಟ ವಿಚಾರವಾಗಿ ಗದಗನಲ್ಲಿ ಮಾತನಾಡಿದ ಅವರು, ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು. ಡಿ.ಕೆ.ಶಿವಕುಮಾರ್​ ಅವರು ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಈಗಾಗಲೇ ನೂರು ಬಾರಿ ನಾವು ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಯಾವುದಾದರೂ ಒಂದಾದರು ದೊಡ್ಡ ಮಟ್ಟದ ಹೋರಾಟ ಮಾಡಿದ್ರಾ ಎಂದು ಪ್ರಶ್ನಿಸಿದರು. ಕೇವಲ ಪೇಪರ್​ನಲ್ಲಿ ಹೇಳಿಕೆ ನೀಡಿ ಪೇಪರ್ ಟೈಗರ್ ಆಗಿದ್ದಾರೆ. ಒಂದು ಕಡೆ ಡಿ.ಕೆ.ಶಿವಕುಮಾರ್​, ಮತ್ತೊಂದೆಡೆ ಸಿದ್ದರಾಮಯ್ಯ ಸೋನಿಯಾ ಗಾಂಧಿಯನ್ನು ತೃಪ್ತಿ ಪಡಿಸಲು ಹೇಳಿಕೆ ನೀಡುತ್ತಾರೆ.

ಟಿಪ್ಪು ಜೊತೆಗೆ ಸಂಗೊಳ್ಳಿ ರಾಯಣ್ಣನ ಪಾಠ ಕೈಬಿಟ್ಟಿರೋ ವಿಚಾರದ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್​​ ಹೇಳಿದ್ದಾರೆ. ಇದು ನನ್ನ ಗಮನಕ್ಕೆ ಬಂದಿಲ್ಲ. ಟಿಪ್ಪು ಹಾಗೂ ಸಂಗೊಳ್ಳಿ ರಾಯಣ್ಣ ಕುರಿತು ಸಹ ಪ್ರಸ್ತಾಪ ಆಗಿತ್ತು. ಗೊಂದಲವನ್ನು ಕೂಡಲೇ ನಿವಾರಿಸುವುದಾಗಿ ಹೇಳಿದ್ದಾರೆ. ವಿವಾದವನ್ನು ಸೃಷ್ಟಿ ಮಾಡುವುದರಲ್ಲಿ ಕಾಂಗ್ರೆಸ್​ಗೆ ‌ ಸಂತೃಪ್ತಿ ಇದೆ. ಇದನ್ನು ಬಿಟ್ಟರೆ ಬೇರೆ ಉದ್ಯೋಗ ಇಲ್ಲ ಅವರಿಗೆ ಎಂದು‌ ಕಿಡಿಕಾರಿದರು.

ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ವಿಚಾರದ ಬಗ್ಗೆ ನನಗೆ ABCDಯೂ ಸಹ ಗೊತ್ತಿಲ್ಲ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೇನೆ. ಅಷ್ಟು ಬಿಟ್ಟರೆ ಈ ಬಗ್ಗೆ ನನಗೆ ABCD ಗೊತ್ತಿಲ್ಲ ಎಂದರು. ನಿಗಮ ಮಂಡಳಿ ಹಂಚಿಕೆ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಅಧಿಕಾರದ ರಾಜಕಾರಣ ಸ್ವಾಭಾವಿಕವಾದದ್ದು. ಎಂ‌ಎಲ್​ಎ ಆಗಲು ಸ್ಥಾನ ಸಿಗಲಿಲ್ಲ ಎಂದರೆ ಅಸಮಾಧಾನ. ಎಂಎಲ್​ಎ ಆದ ಮೇಲೆ ಮಂತ್ರಿಯಾಗಬೇಕು ಅನ್ನೋದು. ಅಧಿಕಾರದ ರಾಜಕಾರಣ ಯಾವಾಗಲೂ ಇರೋದೆ. ನಮ್ಮ ಪಕ್ಷಕ್ಕೆ ಶಕ್ತಿಯಿದೆ. ನಾವು ಅಸಮಾಧಾನ ನಿಭಾಯಿಸುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.