ಗದಗ: ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಬೆಳೆಗಳಿಗೆ ಯೂರಿಯಾ ರಸಗೊಬ್ಬರದ ಕೊರತೆ ನೀಗಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈ ಕುರಿತಾಗಿ ಸತತ ಎರಡು ವರದಿಗಳನ್ನು ಈಟಿವಿ ಭಾರತ ಪ್ರಕಟಿಸಿತ್ತು. ಈ ವರದಿಗಳಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ರಸಗೊಬ್ಬರವನ್ನು ಖರೀದಿಸಿ ತಾಲೂಕುವಾರು ಸರಬರಾಜು ಮಾಡಿದೆ.
ಇದನ್ನೂ ಓದಿ: ಗದಗದಲ್ಲಿ ಯೂರಿಯಾ ಗೊಬ್ಬರ ಅಭಾವ: ಗೊಬ್ಬರ ಖರೀದಿಗೆ ರೈತರ ಪರದಾಟ!
ಈ ತಿಂಗಳಲ್ಲಿ 3,000 ಮೆಟ್ರಿಕ್ ಟನ್ ಸರಬರಾಜು ಯೋಜನೆ ಇದೆ. ಈಗಾಗಲೇ ಕ್ರಿಬ್ಕೋ ಕಂಪನಿಯಿಂದ 800 ಮೆಟ್ರಿಕ್ ಟನ್ ಸರಬರಾಜು ಆಗಿದ್ದು, ರೈತರಿಗೆ ವಿತರಿಸಲು ಜಿಲ್ಲಾಡಳಿತ ಕ್ರಮ ವಹಿಸಿದೆ. ಗದಗಕ್ಕೆ 150, ಮುಂಡರಗಿ 100, ನರಗುಂದ 300, ರೋಣ 150, ಶಿರಹಟ್ಟಿಗೆ 100 ಮೆಟ್ರಿಕ್ ಟನ್ ಯೂರಿಯಾ ಸರಬರಾಜಾಗಿದೆ.
ಇದನ್ನೂ ಓದಿ: ಗೊಬ್ಬರಕ್ಕಾಗಿ ರೈತರ ಪರದಾಟ...ನೂಕುನುಗ್ಗಲಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ ಅನ್ನದಾತ
ನಾಳೆ ಆರ್‌ಸಿಎಫ್ ಕಂಪನಿಯಿಂದ 700 ಮೆಟ್ರಿಕ್ ಟನ್ ಮತ್ತು ಜುವಾರಿ ಕಂಪನಿಯಿಂದ 100 ಮೆಟ್ರಿಕ್ ಟನ್ ಯೂರಿಯಾ ಸರಬರಾಜಾಗಲಿದ್ದು, ಬೇಡಿಕೆಯನುಸಾರ ಯೂರಿಯಾ ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನರಗುಂದ ಪಟ್ಟಣದಲ್ಲಿ ಯೂರಿಯಾ ಗೊಬ್ಬರ ಪಡೆಯಲು ರೈತರು ಮುಗಿಬಿದ್ದು, ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದರು.