ETV Bharat / state

ಗದಗದಲ್ಲಿ ವಾರಿಯರ್ಸ್​ಗೆ ಆಹಾರದ ಪೊಟ್ಟಣ ವಿತರಿಸಿದ ನರೇಂದ್ರ ಮೋದಿ ಅಭಿಮಾನಿ ಬಳಗ

author img

By

Published : May 3, 2021, 10:35 PM IST

Updated : May 3, 2021, 11:01 PM IST

ಗದಗದಲ್ಲಿ ನರೇಂದ್ರ ಮೋದಿ ಅಭಿಮಾನಿ ಬಳಗದ ವತಿಯಿಂದ ಪೊಲೀಸ್ ಇಲಾಖೆ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು ಮತ್ತು ನಿರ್ಗತಿಕರಿಗೆ ಆಹಾರದ ಪೊಟ್ಟಣ ವಿತರಿಸಲಾಗುತ್ತಿದೆ.

distributes food packets to Corona Warriors at Gadag
ಗದಗದಲ್ಲಿ ಕೊರೊನಾ ವಾರಿಯರ್ಸ್​ಗೆ ಆಹಾರದ ಪೊಟ್ಟಣ ವಿತರಿಸುತ್ತಿರುವ ನರೇಂದ್ರ ಮೋದಿ ಅಭಿಮಾನ ಬಳಗ

ಗದಗ: ನಗರದಲ್ಲಿ ನರೇಂದ್ರ ಮೋದಿ ಅಭಿಮಾನಿ ಬಳಗದವರು ವತಿಯಿಂದ ಪೊಲೀಸ್ ಇಲಾಖೆ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕಳೆದ ವರ್ಷ ಲಾಕ್​ಡೌನ್ ಆದ ಸಮಯದಲ್ಲಿ ದಿನನಿತ್ಯ ಒಂದು ಸಾವಿರ ಆಹಾರದ ಪೊಟ್ಟಣಗಳನ್ನು ಹಂಚೋದಕ್ಕೆ ಶುರು ಮಾಡಿದ್ದರು. ಈಗ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದಲ್ಲಿ ಓಡಾಡಿ ನಿರ್ಗತಿಕರಿಗೆ ಅನ್ನಸಂತರ್ಪಣೆ ಮಾಡುತ್ತಿದ್ದಾರೆ. ಪ್ರತಿನಿತ್ಯ ಪಲಾವ್, ಇಡ್ಲಿ, ರೈಸ್​ ಬಾತ್, ಪುಳಿಯೋಗರೆ ಹೀಗೆ ಒಂದೊಂದು ದಿನ ಬಗೆ ಬಗೆಯ ಆಹಾರದ ಪೊಟ್ಟಣ ತಯಾರು ಮಾಡ್ತಾರೆ. ಮುಖ್ಯವಾಗಿ ಕಳೆದ ವರ್ಷ ಸತತ 52 ದಿನಗಳ ಕಾಲ ಆಹಾರದ ಪೊಟ್ಟಣ ಹಂಚಿಕೆ ಮಾಡಿದ್ದಾರೆ.

ಈ ಬಾರಿಯೂ ಸಹ 14 ದಿನಗಳ ಕಾಲ ಆಹಾರದ ಕಿಟ್ ವಿತರಿಸುತ್ತಿದ್ದಾರೆ. ಸಂಘದ ಸದಸ್ಯರು ನಗರದ ಒಂದೊಂದು ಏರಿಯಾಗಳಿಗೆ ತೆರಳುತ್ತಾರೆ. ಪೊಲೀಸ್ ಸಿಬ್ಬಂದಿ, ಜೊತೆಗೆ ಜಿಮ್ಸ್ ವೈದ್ಯಕೀಯ ಸಿಬ್ಬಂದಿ ಮತ್ತು ಹಳೇ‌ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ ಉದರ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.

Last Updated : May 3, 2021, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.