ETV Bharat / state

ಸೋಂಕಿತ ಗರ್ಭಿಣಿಗೆ ಯಶಸ್ವಿ ಹೆರಿಗೆ ಮಾಡಿಸಿದ ಗದಗ ವೈದ್ಯರ ತಂಡ.. - Gadaga latest news

ತಾಯಿಗೆ ಈಗಾಗಲೇ ಒಂದು ಮಗುವಿದೆ. ಮೊದಲನೇ ಹೆರಿಗೆ ಕೂಡಾ ಶಸ್ತ್ರ ಚಿಕಿತ್ಸೆಯ ಮೂಲಕ ಆಗಿತ್ತು. ಇದೀಗ 2ನೇ ಹೆರಿಗೆಯೂ ಶಸ್ತ್ರ ಚಿಕಿತ್ಸೆ ಮೂಲಕವೇ ಮಾಡಲಾಗಿದೆ..

Delivery to infected pregnant
Delivery to infected pregnant
author img

By

Published : Jul 4, 2020, 5:52 PM IST

ಗದಗ : ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಕೊರೊನಾ ಪಾಸಿಟಿವ್ ಹೊಂದಿರುವ ಗರ್ಭಿಣಿಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ.

ವೈದ್ಯರಾದ ಡಾ. ಶಿವನಗೌಡ ಜೋಳದರಾಶಿ, ಡಾ. ಶೃತಿ ಭಾವಿ ಹಾಗೂ ಡಾ. ಅಜಯ್ ಬಸರಿಗಿಡದ ನೇತೃತ್ವದ ವೈದ್ಯರ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದೆ. ಗರ್ಭಿಣಿಗೆ ಇಂದು ಹೆಣ್ಣು ಮಗು ಜನನವಾಗಿದೆ.

ಮಗು 2.7kg ತೂಕ ಹೊಂದಿದೆ. ಆದರೆ, ಮಗುವಿಗೆ ಸ್ವಲ್ಪ ಉಸಿರಾಟದ ತೊಂದರೆ ಇರುವ ಕಾರಣ ಕೋವಿಡ್-19 ನವಜಾತ ಶಿಶು ಘಟಕದಲ್ಲಿರಿಸಿ ಆರೈಕೆ ಮಾಡಲಾಗುತ್ತಿದೆ. ಮಗು ಚೇತರಿಸಿಕೊಳ್ಳುತ್ತಿದೆ, ಬಾಣಂತಿ ಸಹ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ತಾಯಿಗೆ ಈಗಾಗಲೇ ಒಂದು ಮಗುವಿದೆ. ಮೊದಲನೇ ಹೆರಿಗೆ ಕೂಡಾ ಶಸ್ತ್ರ ಚಿಕಿತ್ಸೆಯ ಮೂಲಕ ಆಗಿತ್ತು. ಇದೀಗ 2ನೇ ಹೆರಿಗೆಯೂ ಶಸ್ತ್ರ ಚಿಕಿತ್ಸೆ ಮೂಲಕವೇ ಮಾಡಲಾಗಿದೆ. ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ ಜಿಮ್ಸ್‌ ವೈದ್ಯರ ತಂಡಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.