ETV Bharat / state

ಗದಗ: ಜೀವನೋಪಾಯಕ್ಕಾಗಿ ಭೋರ್ಗರೆವ ನದಿಯಲ್ಲಿ ಸೆಣಸಾಟ - VIDEO - ಮೀನುಗಾರಿಕೆ

ಹಮ್ಮಗಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳ ಜನರು ಜೀವನೋಪಾಯಕ್ಕಾಗಿ ಧುಮ್ಮಿಕಿ ಹರಿಯುವ ನದಿಯ ನೀರಿನಲ್ಲಿ ಜೀವದ ಹಂಗು ತೊರೆದು ಮೀನುಗಾರಿಕೆ ಮಾಡುತ್ತಿದ್ದಾರೆ.

dangerous-fishing
ಮೀನುಗಾರಿಕೆ
author img

By

Published : Jul 16, 2022, 4:49 PM IST

Updated : Jul 16, 2022, 4:58 PM IST

ಗದಗ: ಸತತ ಎರಡು ವಾರಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಇರುವ ಹಳ್ಳಕೊಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಅದರಲ್ಲೂ ತುಂಗಭದ್ರಾ ನದಿ ಪ್ರವಾಹದ ರೀತಿಯಲ್ಲಿ ಭೋರ್ಗರೆಯುತ್ತಿದೆ. ಆದರೂ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ಬಳಿ ಮೀನು ಹಿಡಿಯುವ ಹುಚ್ಚಾಟ ಹೆಚ್ಚಾಗಿದೆ. ಅಪಾಯಮಟ್ಟದಲ್ಲಿ ರಭಸವಾಗಿ ಹರಿಯುವ ನದಿಯಲ್ಲಿಯೇ ತೆಪ್ಪದಲ್ಲಿ ಹೋಗಿ ಮೀನು ಹಿಡಿಯುವ ದುಸ್ಸಾಹಸ ಮಾಡುತ್ತಿದ್ದಾರೆ.

ಹಮ್ಮಗಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳ ಜನರು ಈ ಬ್ಯಾರೇಜ್​ನಿಂದ ಮೀನು ಹಿಡಿದು ಜೀವನ ಸಾಗಿಸುತ್ತಾರೆ. ಆದರೆ ಈಗ ತುಂಗಭದ್ರಾ ನದಿ ಎರಡು ದಂಡೆಯ ಸೋಸಿ ರಭಸವಾಗಿ ಹರಿಯುತ್ತಿರುವುದರಿಂದ ಮೀನು ಹಿಡಿಯಲು ಅನುಕೂಲರವಾಗಿಲ್ಲ. ಒಂದು ವೇಳೆ ಮೀನು ಹಿಡಿಯಲು ಬಳಸುವ ತೆಪ್ಪ ನೀರಿನ ರಭಸಕ್ಕೆ ಪಲ್ಟಿ ಹೊಡೆದರೆ ಅಥವಾ ಸೆಳವಿಗೆ ಕೊಚ್ಚಿಕೊಂಡು ಹೋದಲ್ಲಿ ಜೀವಕ್ಕೆ ಕುತ್ತು ಬರೋ ಸಾಧ್ಯತೆ ಹೆಚ್ಚಿದೆ.

ಜೀವನೋಪಾಯಕ್ಕಾಗಿ ಭೋರ್ಗರೆವ ನದಿಯಲ್ಲಿ ಸೆಣಸಾಟ

ಆದರೆ ಅನಿವಾರ್ಯವಾಗಿ ಜೀವನ ನಡೆಸಲು ಮೀನು ಹಿಡಿಯಲೇ ಬೇಕು. ಇಲ್ಲದಿದ್ರೆ ಇವತ್ತಿನ ದಿನ ಉಪವಾಸ ಎಂಬ ಪರಿಸ್ಥಿತಿ ಕೆಲವರಿದಿದೆ. ಹೀಗಾಗಿ ಜೀವದ ಹಂಗು ತೊರೆದು ತೆಪ್ಪದಲ್ಲಿ‌ ಮೀನು ಹಿಡಿಯುವ ದುಸ್ಸಾಹಸಕ್ಕೆ ಮೀನುಗಾರರರು ಮುಂದಾಗಿದ್ದಾರೆ. ಬ್ಯಾರೇಜ್​ನಿಂದ 1 ಲಕ್ಷ 10 ಸಾವಿರ ಕ್ಯೂಸೆಕ್​ ನೀರು ತುಂಗಭದ್ರಾಕ್ಕೆ ಬಿಡಲಾಗಿದೆ. ಆದರೆ ಜಿಲ್ಲಾಡಳಿತ ಮಾತ್ರ ಇಲ್ಲಿ ಸುರಕ್ಷತೆ ದೃಷ್ಟಿಯಿಂದ ಯಾವುದೇ ಸೆಕ್ಯೂರಿಟಿ ಕೈಗೊಂಡಿಲ್ಲ.

ಇದನ್ನೂ ಓದಿ : ಹಾವೇರಿ: ನದಿ ಮಧ್ಯೆ ಸಿಲುಕಿದ್ದ ಕುದುರೆ... ದಡ ಸೇರಿಸಿದ ಅಗ್ನಿ ಶಾಮಕ ಸಿಬ್ಬಂದಿ

Last Updated : Jul 16, 2022, 4:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.