ETV Bharat / state

ವಿದೇಶಿಗರ ಸೋಗಿನಲ್ಲಿ ಜ್ಯುವೆಲ್ಲರಿ ಶಾಪ್​​ಗೆ ಬಂದ ದಂಪತಿ: 18 ಸಾವಿರ ರೂ. ಎಗರಿಸಿ ಪರಾರಿ

ಜ್ಯುವೆಲ್ಲರಿ ಶಾಪ್​​ಗೆ ​​ಮೂಗುತಿ ಖರೀದಿಸಲು ಎಂದು ವಿದೇಶಿ ಕರೆನ್ಸಿ ತೆಗೆದುಕೊಂಡು ವಿದೇಶಿಗರ ಸೋಗಿನಲ್ಲಿ ಬಂದ ಚಾಲಾಕಿ ದಂಪತಿ ನಗದು ಎಗರಿಸಿ ಪರಾರಿಯಾಗಿದ್ದಾರೆ.

Gadag robbery
ವಿದೇಶಿಗರ ಸೋಗಿನಲ್ಲಿ ಜ್ಯುವೆಲರಿ ಶಾಪ್​​ಗೆ ಬಂದ ದಂಪತಿ
author img

By

Published : Jul 16, 2020, 1:04 PM IST

ಗದಗ: ವಿದೇಶಿಯರು ಅಂತ ಹೇಳಿಕೊಂಡು ಆಭರಣದ ಅಂಗಡಿಗೆ ಎಂಟ್ರಿ ಕೊಟ್ಟಿದ್ದ ದಂಪತಿ, ಅಂಗಡಿ ಮಾಲೀಕನಿಗೆ ಮಕಮಲ್ ಟೋಪಿ ಹಾಕಿ 18 ಸಾವಿರ ರೂ. ದೋಚಿಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ರೋಣ ಪಟ್ಟಣದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಜ್ಯುವೆಲ್ಲರಿ ಶಾಪ್​​ಗೆ ​​ಮೂಗುತಿ ಖರೀದಿಸಲು ಎಂದು ವಿದೇಶಿಗರ ಸೋಗಿನಲ್ಲಿ ಬಂದ ಚಾಲಾಕಿ ದಂಪತಿ, ಇಂಗ್ಲಿಷ್​ನಲ್ಲೇ ಮಾತನಾಡಿದ್ದಾರೆ. ಮೂಗುತಿಯೊಂದನ್ನು ಫೈನಲ್​ ಮಾಡಿ ವಿದೇಶಿ ಕರೆನ್ಸಿ ನೀಡಿದ್ದಾರೆ. ಆದರೆ, ಮಾಲೀಕ ಕೃಷ್ಣಾ ಬಾಕಳೆ ಅವರು, ಇದು ನಮ್ಮಲ್ಲಿ ನಡೆಯುವುದಿಲ್ಲ. ಭಾರತ ದೇಶದ ನೋಟು ಕೊಡಿ ಎಂದಿದ್ದಾರೆ. ನಮ್ಮಲ್ಲಿ ಭಾರತದ ನೋಟು ಇಲ್ಲ, ಈ ನೋಟನ್ನು ತಗೆದುಕೊಳ್ಳಿ, ಭಾರತೀಯ ನೋಟುಗಳು ಹೇಗಿರುತ್ತವೆ ತೋರಿಸಿ ಎಂದು ಪುಸಲಾಯಿಸಿದ್ದಾರೆ. ಮಾಲೀಕ ತನ್ನ ಜೇಬಿನಲ್ಲಿದ್ದ 2000 ರೂ. ಮುಖ ಬೆಲೆಯ 12 ನೋಟುಗಳನ್ನು ತೋರಿಸಿದ್ದಾನೆ.

ವಿದೇಶಿಗರ ಸೋಗಿನಲ್ಲಿ ಜ್ಯುವೆಲ್ಲರಿ ಶಾಪ್​​ಗೆ ಬಂದ ಕಳ್ಳ ದಂಪತಿ

ಇದನ್ನು ನೋಡಲು ತೆಗೆದುಕೊಂಡ ಕಳ್ಳ 3 ನೋಟುಗಳು ಅಂದರೆ 6 ಸಾವಿರ ಎಗರಿಸಿ ಉಳಿದವುಗಳನ್ನು ಮಾಲೀಕನ ಜೇಬಿಗೆ ಹಾಕಿಕೊಳ್ಳುವಂತೆ ತಾನೇ ಒತ್ತಾಯಿಸಿದ್ದಾನೆ. ಬಳಿಕ ಮತ್ತೆ ಬೇರೆ ನೋಟುಗಳಿವೆಯೇ ಎಂದು ಕೇಳಿದ್ದಾನೆ. ಆಗ ಮಾಲೀಕ 500 ರೂ. ನೋಟುಗಳು ಹೀಗಿರುತ್ತವೆ ಎಂದು ತೋರಿಸಿದ್ದಾನೆ. ಕಳ್ಳನು ಆಗ ನಿಮ್ಮ ಬಳಿ ಇರುವ ಅಷ್ಟೂ ನೋಟುಗಳನ್ನು ತೋರಿಸಿ ಎಂದಿದ್ದಾನೆ. ಮಾಲೀಕನು 25 ಸಾವಿರ ರೂ. ಇರುವ ಕಟ್ಟು ತೋರಿಸಿದ್ದಾನೆ. ನೋಟಿನ ಕಂತನ್ನು ಕೈಯ್ಯಲ್ಲಿ ಹಿಡಿದ ಕಳ್ಳರು, ಮಾಲೀಕನ ಗಮನವನ್ನು ಬೇರೆಡೆ ಸೆಳೆದು 12 ಸಾವಿರ ರೂ. ಎಗರಿಸಿದ್ದಾರೆ. ಬಳಿಕ ವಿದೇಶಿ ನೋಟುಗಳನ್ನು ಬ್ಯಾಂಕ್​ನಲ್ಲಿ ಬದಲಿಸಿಕೊಂಡು ಬರುವುದಾಗಿ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ಎಲ್ಲ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಖದೀಮರು ತೆರಳಿದ ಬಳಿಕ ಹಣ ಎಣಿಸಿದಾಗ 18 ಸಾವಿರ ಮಂಗ ಮಾಯವಾಗಿರುವುದು ಕೃಷ್ಣ ಅವರ ಅರಿಗೆ ಬಂದಿದೆ. ರೋಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.