ಗದಗ: ಜಿಲ್ಲೆಯಲ್ಲಿಂದು 6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 322ಕ್ಕೆ ಏರಿಕೆಯಾಗಿದೆ.
ರೋಣ ತಾಲ್ಲೂಕಿನ ಹುಲ್ಲೂರು ಗ್ರಾಮದ ನಿವಾಸಿ 26 ವರ್ಷದ ಪುರುಷನಿಗೆ (ಪಿ-38890) ಸೋಂಕು ದೃಢಪಟ್ಟಿದ್ದು, ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಜಿಮ್ಸ್ ಆಸ್ಪತ್ರೆಯ 22 ವರ್ಷದ ಮಹಿಳೆ (ಪಿ-38892) ಹಾಗೂ ಕಳಸಾಪುರ ರಸ್ತೆಯ ಬ್ಲೂಸ್ಟಾರ್ ಬಜಾರ್ ಹತ್ತಿರದ ನಿವಾಸಿ 59 ವರ್ಷದ ಮಹಿಳೆಗೆ (ಪಿ-38894) ಕೆಮ್ಮು, ಜ್ವರ ರೋಗ ಲಕ್ಷಣದಿಂದಾಗಿ ಸೋಂಕು ದೃಢಪಟ್ಟಿದೆ.
ಗದಗ-ಬೆಟಗೇರಿ ಭಜಂತ್ರಿ ಓಣಿಯ 31 ವರ್ಷದ ಪುರುಷನಿಗೆ (ಪಿ-38896 ) ಹಾಗೂ ಹುಡ್ಕೋ ಕಾಲೋನಿ ನಿವಾಸಿ 14 ವರ್ಷದ ಯುವಕನಿಗೆ ಸೋಂಕಿತರ ಸಂಪರ್ಕದಿಂದಾಗಿ ದೃಢಪಟ್ಟಿದೆ. ನರಗುಂದ ತಾಲ್ಲೂಕಿನ ದಂಡಾಪುರದ ನಿವಾಸಿ 24 ವರ್ಷದ ಪುರುಷನಿಗೆ (ಪಿ-38900) ಬೆಂಗಳೂರು ಪ್ರಯಾಣದಿಂದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.
ಜಿಲ್ಲೆಯಲ್ಲಿಂದು ಐವರು ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಓರ್ವ ಸೋಂಕಿತ ಕೊರೊನಾಗೆ ಬಲಿಯಾಗಿದ್ದಾನೆ. ಸದ್ಯ, 134 ಸಕ್ರಿಯ ಪ್ರಕರಣಗಳಿದ್ದು, ಜಿಮ್ಸ್ನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.