ಗದಗ : ಕೊರೊನಾ ಸೋಂಕಿತ 80 ವರ್ಷದ ವೃದ್ಧೆಯ ಸಾವಿನಿಂದ ಅವಳಿ ನಗರ ಸಂಪೂರ್ಣ ಸ್ತಬ್ಧವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಮತ್ತಷ್ಟು ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.
ನಿನ್ನೆ ನಗರದಲ್ಲಿ 80 ವರ್ಷದ P-166 ವೃದ್ಧೆ ಮಹಾಮಾರಿ ಕೋವಿಡ್-19ಗೆ ಬಲಿಯಾಗಿದ್ದರಿಂದ ಜನರಲ್ಲಿ ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಜನ ಕೂಡ ಮನೆಯಿಂದ ಹೊರಬರದೆ ಆದೇಶ ಪಾಲಿಸುತ್ತಿದ್ದಾರೆ.
ಅಲ್ಲದೆ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ವಾರದಲ್ಲಿ ಕೇವಲ ಎರಡು ಬಾರಿ ತರಕಾರಿ ಮತ್ತು ದಿನ ಬಳಕೆ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಜನರಿಂದ ಬೆಂಬಲ ವ್ಯಕ್ತವಾಗಿದೆ.