ETV Bharat / state

ಕೊರೊನಾ ದೃಢಪಟ್ಟು ಎರಡೇ ದಿನಕ್ಕೆ ಮನೆ ಸೇರಿದ ವೈದ್ಯ: ಸ್ಥಳೀಯರ ಆರೋಪ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ - ಗದಗನ ಪಂಚಾಕ್ಷರಿ ನಗರ ಕಂಟೇನ್​​ಮೆಂಟ್​​ ಝೋನ್

ಕೊರೊನಾ ಸೋಂಕಿತ ವೈದ್ಯರೊಬ್ಬರು ಸೋಂಕು ದೃಢಪಟ್ಟ ಎರಡೇ ದಿನಕ್ಕೆ ಮನೆ ಸೇರಿದ್ದು, ಇದರಿಂದಾಗಿ ಸ್ಥಳೀಯರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Containment Zone of Gadag
ಗದಗನ ಪಂಚಾಕ್ಷರಿ ನಗರದ ನಿಷೇಧಿತ ಪ್ರದೇಶ
author img

By

Published : Jun 12, 2020, 4:40 PM IST

ಗದಗ: ಕೊರೊನಾ ಸೋಂಕಿತ ವೈದ್ಯರೊಬ್ಬರು ಸೋಂಕು ದೃಢಪಟ್ಟ ಎರಡೇ ದಿನಕ್ಕೆ ಮನೆ ಸೇರಿದ್ದು, ಗದಗನ ಪಂಚಾಕ್ಷರಿ ನಗರದ ನಿಷೇಧಿತ ಪ್ರದೇಶದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೂನ್ 6ರಂದು ಗದಗ ಜಿಮ್ಸ್ ವೈದ್ಯ (ಪಿ -5014)ಗೆ ಸೋಂಕು ದೃಢಪಟ್ಟಿತ್ತು. ಸೋಂಕಿತ ವೈದ್ಯ ಪಂಚಾಕ್ಷರಿ ನಗರದವರಾಗಿದ್ದರಿಂದ ಆ ಪ್ರದೇಶವನ್ನು ಕಂಟೈನ್ಮೆಂಟ್​​​​ ಝೋನ್ ಮಾಡಲಾಗಿದೆ. ಆದರೆ ಸೋಂಕು ಕಾಣಿಸಿಕೊಂಡ ವ್ಯಕ್ತಿ ಎರಡೇ ದಿನಕ್ಕೆ ರಾತ್ರಿ ಮನೆ ಸೇರಿದ್ದಾರೆ. ಕುಟುಂಬದವರ ಜೊತೆ ಓಡಾಡ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜಿಲ್ಲಾಡಳಿತದ ವಿರುದ್ಧ ಜನರ ಆಕ್ರೋಶ

ಮನೆಗೆ ಯಾಕೆ ಬಂದ್ರಿ ಎಂದು ಸ್ಥಳೀಯರು ಕೇಳಿದ್ರೆ, ನೆಗೆಟಿವ್ ಇದೆ, ಪಾಸಿಟಿವ್ ಇಲ್ಲ ಎಂದು ಕುಟುಂಬಸ್ಥರು ವಾಗ್ವಾದ ಮಾಡ್ತಿದ್ದಾರಂತೆ. ಪಾಸಿಟಿವ್ ಇಲ್ಲವೆಂದ್ರೆ ಕಂಟೈನ್ಮೆಂಟ್​​​ ಯಾಕೆ? ಎರಡೇ ದಿನಕ್ಕೆ ಹೇಗೆ ಬಿಟ್ರಿ? ಕೊನೇ ಪಕ್ಷ 7 ದಿನ ಸಾಂಸ್ಥಿಕ ಕ್ವಾರಂಟೈನ್​​​ ಯಾಕೆ ಮಾಡಲಿಲ್ಲ? ಪ್ರಭಾವಿಗಳಿಗೊಂದು‌ ನ್ಯಾಯ, ಜನಸಾಮಾನ್ಯರಿಗೊಂದು ನ್ಯಾಯವೇ ಎಂದು ಸ್ಥಳೀಯರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.