ETV Bharat / state

ಗದಗ-ಬೆಟಗೇರಿ ನಗರಸಭೆ ಗದ್ದುಗೆ ಏರಲು ಕಾಂಗ್ರೆಸ್- ಬಿಜೆಪಿ ಗುದ್ದಾಟ.. ಬಿಜೆಪಿಗೆ 'ಕೈ' ಶಾಕ್ - ಗದಗ ಬೆಟಗೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ

ಗದಗ-ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದು ಗದ್ದುಗೆ ಏರುವ ಕನಸಿನಲ್ಲಿದೆ. ಆದರೆ, ಕಾಂಗ್ರೆಸ್ ಮಾತ್ರ ಬಿಜೆಪಿ ಕನಸಿಗೆ ಮಣ್ಣೆರೆಚುವ ಶತ ಪ್ರಯತ್ನ ನಡೆಸಿದೆ. ಏನಾದರೂ ಮಾಡಿ ಈ ಬಾರಿಯೂ ಗದಗ-ಬೆಟಗೇರಿ ನಗರಸಭೆಯ ಅಧಿಕಾರದ ಗದ್ದುಗೆ ಏರೋಕೆ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.

municipal-election
ನಗರಸಭೆ
author img

By

Published : Jan 23, 2022, 9:34 PM IST

ಗದಗ: ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಬಾರಿ ಕುತೂಹಲ ಘಟ್ಟ ತಲುಪಿದೆ. ಹಲವು ದಶಕಗಳ ಬಳಿಕ ಮ್ಯಾಜಿಕ್​ ನಂಬರ್ ತಲುಪಿದ್ದ ಬಿಜೆಪಿಗೆ ಕಾಂಗ್ರೆಸ್ ನಾಯಕರು ಭಾರಿ ಪೆಟ್ಟುಕೊಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಬಾರಿ ಗದಗ ಬೆಟಗೇರಿ ನಗರಸಭೆ ಗದ್ದುಗೆ ಬಿಜೆಪಿಗೆ ಅನ್ನೋವಷ್ಟರಲ್ಲೇ ಪ್ಲಾನ್ ಎಲ್ಲಾ ಉಲ್ಟಾಪಲ್ಟಾ ಆಗಿಬಿಟ್ಟಿದೆ. ಕಮಲ ಕಲಿಗಳ ಲೆಕ್ಕಾಚಾರವೆಲ್ಲಾ ತೆಲೆಕೆಳಗಾಗುವಂತೆ ಕೈ ಕಲಿಗಳು ಶತ ಪ್ರಯತ್ನ ಮಾಡ್ತಿದ್ದಾರೆ. ಹೊರಗಿನಿಂದ ಮೂರು ಜನ ವಿಧಾನ ಪರಿಷತ್ ಸದಸ್ಯರು ಮತ್ತು ಓರ್ವ ರಾಜ್ಯಸಭೆ ಸದಸ್ಯರನ್ನು ನಗರಸಭೆಯ ಚುನಾವಣೆಯ ಮತದಾರ ಪಟ್ಟಿಯಲ್ಲಿ ಸೇರಿಸಿ ಆ ಮೂಲಕ ಗದ್ದುಗೆ ಮತ್ತೆ ಕೈ ಪಾಲಾಗುವಂತಹ ಕಸರತ್ತು ನಡೆಸಿದ್ದಾರೆ ಎನ್ನಲಾಗ್ತಿದೆ.

ಸೋಮವಾರ ನಡೆಯುವ ಚುನಾವಣೆಯಲ್ಲಿ ಗದ್ದುಗೆ ಯಾರ ಪಾಲು.. ಹೌದು, ಗದಗ-ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದು ಗದ್ದುಗೆ ಏರುವ ಕನಸಿನಲ್ಲಿದೆ. ಆದರೆ, ಕಾಂಗ್ರೆಸ್ ಮಾತ್ರ ಬಿಜೆಪಿ ಕನಸಿಗೆ ಮಣ್ಣೆರೆಚುವ ಶತ ಪ್ರಯತ್ನ ನಡೆಸಿದೆ. ಏನಾದರೂ ಮಾಡಿ ಈ ಬಾರಿಯೂ ಗದಗ ಬೆಟಗೇರಿ ನಗರಸಭೆಯ ಅಧಿಕಾರದ ಗದ್ದುಗೆ ಏರೋಕೆ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಅದೇನಪ್ಪ ಅಂದ್ರೆ ಮೂವರು ಎಂಎಲ್‌ಸಿ, ಓರ್ವ ರಾಜ್ಯಸಭಾ ಸದಸ್ಯರನ್ನೊಳಗೊಂಡಂತೆ ನಾಲ್ಕು ಜನ ಜನಪ್ರತಿನಿಧಿಗಳನ್ನು ಗದಗ-ಬೆಟಗೇರಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆಗೊಳಿಸುವಂತೆ ಮನವಿ ಮಾಡಿದ್ದಾರೆ.

ಈ ಮೂಲಕ ನಗರಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಪ್ಲಾನ್ ಮಾಡಿದೆ. ವಿಧಾನ ಪರಿಷತ್​ ಸದಸ್ಯರಾದ ಸಲೀಂ ಅಹ್ಮದ್, ಮೋಹನ್‌ಕುಮಾರ್​ ಕೊಂಡಜ್ಜಿ, ಪ್ರಕಾಶ ರಾಥೋಡ್​ ಹಾಗು ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಜನವರಿ 14 ರಂದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಭಾರಿ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಜೆಪಿ ಕೂಡ ತನ್ನ ವಿಧಾನ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಅರ್ಜಿ ಸಲ್ಲಿಸಿದೆ. ಬಿಜೆಪಿಯ ಎಂಎಲ್​ಸಿ ಎಸ್. ವಿ ಸಂಕನೂರ ಅವರು ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಇದು ನಗರದಲ್ಲಿ ಭಾರಿ ಕುತುಹೂಲ ಮೂಡಿಸಿದೆ.

ಎಸ್​. ವಿ ಸಂಕನೂರು ಮಾತನಾಡಿದ್ದಾರೆ

ಗದಗ-ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಸಂಖ್ಯಾ ಬಲ ಈಗ ಸಮನಾಗಿದೆ. ಅಂದರೆ, ಬಿಜೆಪಿ 18 ಸದಸ್ಯರು ಓರ್ವ ಸಂಸದರು ಸೇರಿ 19 ಸದಸ್ಯರ ಸಂಖ್ಯಾ ಬಲವಿದೆ. ಕಾಂಗ್ರೆಸ್ 15 ಸದಸ್ಯರು ಹಾಗು ಇಬ್ಬರು ಪಕ್ಷೇತರು ಹಾಗು ಓರ್ವ ಶಾಸಕರು ಸೇರಿ 18 ಬಲ ಇದೆ. ಹಾಗಾಗಿ, ಕಾಂಗ್ರೆಸ್ ಓರ್ವ ರಾಜ್ಯಸಭಾ ಸದಸ್ಯ ಹಾಗು ಮೂವರು ವಿಧಾನ ಪರಿಷತ್ ಸದಸ್ಯರನ್ನು ಗದಗ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ನಗರಸಭೆ ಗದ್ದುಗೆ ಏರಲು ಪ್ಲಾನ್ ಮಾಡಿದೆ.

ಜೊತೆಗೆ ಕಾಂಗ್ರೆಸ್​​ನ ಒಳತಂತ್ರಕ್ಕೆ ಬೆದರಿ ಗೆಲುವು ಪಡೆದ ಬಿಜೆಪಿಯ ಎಲ್ಲಾ 18 ಜನ ಸದಸ್ಯರನ್ನು ಬಿಜೆಪಿ ಅಜ್ನಾತ ಸ್ಥಳದಲ್ಲಿ ಇಟ್ಟು ಕೈಗೆ ಪ್ರತಿತಂತ್ರ ಹೂಡುತ್ತಿದ್ದಾರೆ. ಆದರೆ, ಇದರಲ್ಲಿ ಕಾಂಗ್ರೆಸ್ ಪ್ಲಾನ್ ಯಶಸ್ವಿಯಾಗೋದು ಬಹುತೇಕ ಕಷ್ಟ ಎನ್ನಲಾಗಿದೆ. ಯಾಕಂದರೆ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಕುರಿತಂತೆ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಹಾಗಾಗಿ, ನಿಗದಿಯಂತೆ ಜನವರಿ 24 ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಈಗಾಗಲೇ ಅರ್ಜಿದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಸಂಬಂಧ ಅಧಿಕಾರಿಗಳ ಮೇಲೆ ಎರಡೂ ಕಡೆಯಿಂದ ಭಾರಿ ಒತ್ತಡ ಹೇರಲಾಗ್ತಿದೆ. ಹಾಗಾಗಿ, ಎರಡೂ ಪಕ್ಷದ ಕಡೆಯಿಂದ ಕಾನೂನಿಗೆ ಅವಕಾಶವಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಬಿಜೆಪಿ ನಾಯಕರು ಕೈ ನಡೆಯ ಬಗ್ಗೆ ಕಿಡಿಕಾರುತ್ತಿದ್ದಾರೆ.

ಇನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ಕಾಂಗ್ರೆಸ್​ನ ವಿಧಾನ ಪರಿಷತ್​ ಸದಸ್ಯರ ಕುರಿತು ಬಿಜೆಪಿಗರು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣ, ವಾಟ್ಸಪ್​​ನಲ್ಲಿ ಗದಗ-ಬೆಟಗೇರಿ ಅವಳಿ ನಗರ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರ ಏನು?. ಗದಗನಲ್ಲಿ ಮತ್ತೊಂದು ಮನೆ ಮಾಡಿದ್ದೀರಾ? ಅಂತ ಪ್ರಶ್ನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಕೂಡ ಸೋಮವಾರ ನಡೆಯುವ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಅಖಾಡಕ್ಕೆ ಧುಮಕಲಿದೆ. ಇದು ಬಿಜೆಪಿ ಪಾಳೆಯದ ನಿದ್ದೆಗೆಡಿಸಿದೆ. ಜೊತೆಗೆ ಆಪರೇಷನ್ ಕಾಂಗ್ರೆಸ್​ ಭೀತಿಯೂ ಸಹ ಮನೆ ಮಾಡಿದೆ. ಒಟ್ಟಿನಲ್ಲಿ ಗದ್ದುಗೆ ಕಸರತ್ತು ಭಾರಿ ಕುತೂಹಲ ಮೂಡಿಸಿದೆ‌.

ಓದಿ: ಪ್ರತಿಮೆ ಸ್ಥಾಪನೆ ಸಾಕಾಗಲ್ಲ.. ನೇತಾಜಿ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿ : ಕೇಂದ್ರಕ್ಕೆ ದೀದಿ ಕರೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.