ETV Bharat / state

ಮಹದಾಯಿ ನದಿಯನ್ನು ಮಲಪ್ರಭಾಗೆ ಜೋಡಿಸುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಸಿಎಂ ಬೊಮ್ಮಾಯಿ

ಮೂರು ದಿನಗಳ ಲಕ್ಕುಂಡಿ‌ ಉತ್ಸವಕ್ಕೆ ಶುಕ್ರವಾರ ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ ಚಾಲನೆ ನೀಡಿ ಹಲವು ಯೋಜನೆಗಳ ಕುರಿತು ಮಾತನಾಡಿದ್ದಾರೆ.

Lakkundi festival program held in Gadag
ಗದಗದಲ್ಲಿ ನಡೆದ ಲಕ್ಕುಂಡಿ‌ ಉತ್ಸವ ಕಾರ್ಯಕ್ರಮ
author img

By

Published : Feb 11, 2023, 10:30 AM IST

Updated : Feb 11, 2023, 12:25 PM IST

ಗದಗ: ಮಹದಾಯಿ ನದಿಯನ್ನು ಮಲಪ್ರಭಾಗೆ ಜೋಡಿಸುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ ಎಂದು ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ ಹೇಳಿದರು. ಮೂರು ದಿನಗಳ ಲಕ್ಕುಂಡಿ‌ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ‌‌ ಮಾತನಾಡಿದ ಅವರು ಪ್ರಧಾನಮಂತ್ರಿ ಮೋದಿ ಅವರು ಈ ಯೋಜನೆಗೆ ನೋಟಿಫಿಕೇಷನ್ ಹೊರಡಿಸಿ ಡಿಪಿಆರ್ ಗೆ ಅನುಮೋದನೆಯನ್ನು ನೀಡಿದ್ದಾರೆ. ಸವದತ್ತಿ ಯಲ್ಲಮ್ಮನ ಪಾದದಿಂದ ಬನಶಂಕರಿವರೆಗೆ ಮಹದಾಯಿ ನೀರನ್ನು ಹರಿಸಲು ಸರ್ಕಾರ ಸಿದ್ಧವಿದೆ ಎಂದರು.

ಹಾಗೆ ನೆನಗುದಿಗೆ ಬಿದ್ದಿದ್ದ ಸಿಂಗಟಾಲೂರು ಏತ ನೀರಾವರಿ ಯೋಜನೆ ಚಾಲನೆ ನೀಡಿದ್ದಲ್ಲದೇ, ಹನಿ ನೀರಾವರಿ ಯೋಜನೆಗೆ ನೂರಾರು ಕೋಟಿ ರೂಪಾಯಿ ಅನುದಾನ‌ ನೀಡಲಾಗಿದೆ. ನಾವು ಸುಳ್ಳು ಭರವಸೆ ನೀಡಲ್ಲ. ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ಮುಂಡರಗಿ ತಾಲೂಕಿನ ಜಾಲವಾಡಗಿ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಲಾಗುವುದು. ಈ ಯೋಜನೆ ಕುರಿತು ಈಗಾಗಲೇ ಟೆಂಡರ್ ಕರೆಯಲಾಗಿದೆ. ಇದಕ್ಕೆ ಡಿಪಿಆರ್ ಸಿದ್ಧಪಡಿಸಿ ಯೋಜನೆಗೆ ಅಡಿಗಲ್ಲು ಹಾಕಲಾಗುವುದು. ಈ ಯೋಜನೆ ಅನುಷ್ಠಾನಗೊಳಿಸಿದರೆ ಗದಗ ಕ್ಷೇತ್ರದ 18 ಕೆರೆಗಳನ್ನು ತುಂಬಿಸಬಹುದು ಹಾಗೂ ಮುಂಡರಗಿ ತಾಲೂಕಿನ‌ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.

Lakkundi festival program held in Gadag
ಗದಗದಲ್ಲಿ ನಡೆದ ಲಕ್ಕುಂಡಿ‌ ಉತ್ಸವ ಕಾರ್ಯಕ್ರಮ

ಲಕ್ಕುಂಡಿ ಸೇರ್ಪಡೆ: ಕಲ್ಯಾಣ ಚಾಲುಕ್ಯರು ಆಳ್ವಿಕೆ ಮಾಡಿದ ಲಕ್ಕುಂಡಿಯು ಅಪರೂಪದ ಶಿಲಾಶಾಸನ ಹೊಂದಿರುವ ಸ್ಥಳವಾಗಿದೆ. ಇಲ್ಲಿನ ಪಾರಂಪರಿಕ ವೈಭವವನ್ನು ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯದಲ್ಲಿ ಮೈಸೂರು ಮತ್ತು ಹಂಪಿ ಎರಡು ಸರ್ಕ್ಯೂಟ್ ಮಾಡಲಾಗುತ್ತಿದೆ. ಹಂಪಿ ಸರ್ಕ್ಯೂಟ್ ನಲ್ಲಿ ಲಕ್ಕುಂಡಿಯನ್ನೂ ಸೇರ್ಪಡೆಗೊಳಿಸಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಕೈಗಾರಿಕಾ ಟೌನ್ ಶಿಪ್ ಭರವಸೆ : ಗದಗ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ನಾನಂತೂ ರೆಡಿ ಇದ್ದೇನೆ. ಆದ್ದರಿಂದ ಸಚಿವ ಸಿ ಸಿ ಪಾಟೀಲ್ ಅವರು ಕೂಡಲೇ ಅಗತ್ಯ ಜಮೀನು ಒದಗಿಸಿದರೆ ಕೈಗಾರಿಕೆ ಟೌನ್ ಶಿಪ್ ಘೋಷಣೆ ಮಾಡಲಾಗುವುದು. ಅಗತ್ಯ ಜಮೀನು‌‌ ನೀಡಲು ಕೂಡಲೇ ಜಿಲ್ಲಾಡಳಿತ ಕಾರ್ಯ ಪ್ರವೃತ್ತರಾಗಬೇಕು. ಇಲ್ಲೊಂದು ಕೈಗಾರಿಕೆ ಸ್ಥಾಪಿಸಿದರೆ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಮುಂದುವರೆದು ಪ್ರಾಸ್ತಾವಿಕ ಮಾತನಾಡಿದ ಸಚಿವ ಸಿ ಸಿ‌ ಪಾಟೀಲ್, ಲಕ್ಕುಂಡಿ ಉತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ, ಬಜೆಟ್ ಅಧಿವೇಶನದ‌ ಮಧ್ಯೆಯೂ ಸಿಎಂ ಉತ್ಸವ ಉದ್ಘಾಟನೆಗೆ ಆಗಮಿಸಿದ್ದು ನಮಗೆಲ್ಲೂ ಸಂತಸ ತಂದಿದೆ. ಉತ್ಸವದಲ್ಲಿ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ. ಲಕ್ಕುಂಡಿ ಐತಿಹಾಸಿಕ ವೈಭವ ಹೊಂದಿದ್ದು ದಾನ ಚಿಂತಾಮಣಿ ಅತ್ತಿಮಬ್ಬೆ ಸೇರಿ ಇತಿಹಾಸವನ್ನು ವಿವರಿಸಿದರು. ಜಿನಾಲಯ, ನನ್ನೇಶ್ವರ ದೇವಾಲಯ, ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ನರಗುಂದ ಕ್ಷೇತ್ರಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ತರುವ ಮೂಲಕ ಅಭಿವೃದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಅವರು ಕ್ಷೇತ್ರದ ಅಭಿವೃದ್ಧಿಗೆ‌ ದಾರಾಳವಾಗಿ ಹಣ ನೀಡಿದ್ದಾರೆ ಎಂದು ತಿಳಿಸಿದರು.

ಸಚಿವ ಬಿ ಎ ಬಸವರಾಜ ಮಾತನಾಡಿ, ಲಕ್ಕುಂಡಿ ಗತವೈಭವವನ್ನು ಜೀವಂತಾಗಿ ಇಟ್ಟಿರುವ ಅಪರೂಪದ ತಾಣವಾಗಿದೆ. ಕರೊನಾದಿಂದ ಉತ್ಸವ ಮಾಡಲು ಆಗಿರಲಿಲ್ಲ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಉತ್ಸವವನ್ನು ಅದ್ದೂರಿಯಾಗಿ ಅಚರಿಸಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಚಿವ ಶ್ರೀರಾಮುಲು ಮಾತನಾಡಿ, ಕಲಾವಿದರು ಕಣ್ಮರೆ‌ಯಾದರೂ ಅವರು ಮಾಡಿದ ಕಾಲಕೃತಿ ಶಾಶ್ವತವಾಗಿ ಉಳಿಯುತ್ತದೆ. ಅದನ್ನು ಉಳಿಸಿ ಬೆಳೆಸಲು ಸರ್ಕಾರದಿಂದ ಉತ್ಸವ ಆಚರಿಸಲಾಗುತ್ತದೆ. ಇಲ್ಲಿನ ಶಿಲ್ಪಕಲೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಶಿವನ ಜೊತೆ ಜೈನ ಮಂದಿರಗಳು ಐತಿಹಾಸಿಕವಾಗಿ ಶ್ರೀಮಂತ ಸ್ಥಳವಾಗಿದೆ‌. ಐತಿಹಾಸಿಕ ತಾಣಗಳನ್ನು ಜನರಿಗೆ ತಿಳಿಸಬೇಕು ಎಂಬ ಕಾರಣದಿಂದ ಉತ್ಸವ ಆಯೋಜಿಸಲಾಗುತ್ತಿದೆ. ಕಿತ್ತೂರು‌ ಕರ್ನಾಟಕದಲ್ಲಿ ಟೌನ್ ಶಿಪ್ ನಿರ್ಮಿಸಿ 50 ಸಾವಿರ ಉದ್ಯೋಗ ಕಲ್ಪಿಸಲು ಶ್ರಮಿಸಿದ್ದಾರೆ. ಕಳಸ ಬಂಡೂರಿ ಯೋಜನೆಗ ಅನುಮೋದನೆ ಪಡೆಯಲು‌ ಸಿಎಂ ಶ್ರಮಿಸಿದ್ದಾರೆ. ಮುಖ್ಯಮಂತ್ರಿ ಎಸ್ಸಿ ಎಸ್ಟಿ ಸಮಾಜಕ್ಕೆ ಹೆಚ್ಚು ಮೀಸಲಾತಿ ನೀಡಿದ್ದಾರೆ. ಗದಗ ನಗರಕ್ಕೆ 600 ಕೋಟಿ ಅನುದಾನ, ಬೆಳೆ ಹಾನಿಗೆ 209 ಕೋಟಿ ರೂ., ಬಡವರ ಪರ ಮುಖ್ಯಮಂತ್ರಿ ಇದ್ದಾರೆ ಎಂದು ಸಿಎಂ ಅವರನ್ನು ಸಮರ್ಥಿಸಿಕೊಂಡರು.

ಸಚಿವ ಮುರುಗೇಶ ನಿರಾಣಿ, ಶಾಸಕರಾದ ರಾಮಣ್ಣ ಲಮಾಣಿ, ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಎಂಸಿ.ಎ ನಿಗಮದ ಅಧ್ಯಕ್ಷ ಎಂ.ಎಸ್ ಕರಿಗೌಡ್ರ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ದು ಪಲ್ಲೇದ, ಲಕ್ಕುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಗದಗಿನ, ಉಪಾಧ್ಯಕ್ಷ ರೆವಣಸಿದ್ದಪ್ಪ ಉಪಸ್ಥಿತರಿದ್ದರು.

ಇವರಲ್ಲದೆ, ಜಿಲ್ಲಾ ಉಸ್ತವಾರಿ ಕಾರ್ಯದರ್ಶಿ ಮಹಮ್ಮದ್ ಮೋಹಸಿನ್, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಜಿಲ್ಲಾ ಪಂಚಾಯತ್​ ಸಿಇಒ ಡಾ. ಸುಶೀಲಾ ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನ್ಯಾಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೆಯಿ ಹಾಜರಿದ್ದರು.

ಇದಕ್ಕೂ ಮುನ್ನ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಉಚಿತ ಸಾರಿಗೆ ಬಸ್‍ಗಳಿಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹಾಗೂ ಎಂ ಸಿ ಎ ನಿಗಮದ ಅಧ್ಯಕ್ಷ ಎಂ ಎಸ್ ಕರಿಗೌಡ್ರ ಅವರು ಗದಗ ಹೊಸ ಬಸ್ ನಿಲ್ದಾಣದಲ್ಲಿ ಶುಕ್ರವಾರ ಚಾಲನೆ ನೀಡಿದರು. ಚಾಲನೆ ಬಳಿಕ ಮಾತನಾಡಿದ ಎಸ್.ವಿ. ಸಂಕನೂರ, ಐತಿಹಾಸಿಕ ಲಕ್ಕುಂಡಿ ಉತ್ಸವಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುವ ಎಲ್ಲ ಸಾರ್ವಜನಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ದೊರೆಯಬೇಕು. ಇತರ ಜಿಲ್ಲೆಗಳಿಂದ ಬರುವವರಿಗೆ ಸುಗಮ ಸಾರಿಗೆ ಸಂಚಾರ ತಲುಪಬೇಕು ಎಂದು ಹೇಳಿದರು.

ಒಟ್ಟು 10 ಬಸ್‍ಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ಸಂಚರಿಸಲು ಸೌಲಭ್ಯ ಒದಗಿಸಿದ್ದು, ಗದಗಿನ ಹೊಸ ಬಸ್ ನಿಲ್ದಾಣ ಹಾಗೂ ಹಳೇ ಬಸ್ ನಿಲ್ದಾಣದಿಂದ ನಿರಂತರವಾಗಿ ಬಸ್‍ಗಳು ಸಂಚರಿಸಲಿವೆ. ಸಾರ್ವಜನಿಕರು ಬಸ್‍ಗಳ ಉಚಿತ ಸೇವೆ ಪ್ರಯೋಜನೆ ಪಡೆಯಬೇಕು ಎಂದು ತಿಳಿಸಿದರು. ಉದ್ಘಾಟನೆ ನಂತರ ಅದೇ ಬಸ್‍ನಲ್ಲಿ ಲಕ್ಕುಂಡಿಯವರೆಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಸಂಚರಿಸುವ ಮೂಲಕ ಮಾದರಿಯಾದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ., ಉಪವಿಭಾಗಾಧಿಕಾರಿ ಅನ್ನಪೂರ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮೆಹಬೂಬ ತುಂಬರಮಟ್ಟಿ, ಡಿಯುಡಿಸಿ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ ಶಿರಾಳೆ, ಪ್ರದೀಪ ನವಲಗುಂದ ವಾ.ಕ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶೀನಯ್ಯ ಹಾಗೂ ಸಿಬ್ಬಂದಿ ಹಾಜರಿದ್ದರು.

ಇದನ್ನೂ ಓದಿ: ಇಂದು ಮಂಗಳೂರಿಗೆ ಅಮಿತ್​ ಶಾ; ಬಿಜೆಪಿ 'ಚಾಣಕ್ಯ'ನ ಕಾರ್ಯಕ್ರಮದ ಪಟ್ಟಿ ಹೀಗಿದೆ

Last Updated : Feb 11, 2023, 12:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.