ETV Bharat / state

ಪರಿಷತ್​ ಚುನಾವಣೆಗೆ ಸಿಎಂ, ಮಾಜಿ ಸಿಎಂ ಭರ್ಜರಿ ಪ್ರಚಾರ: ಕೊರೊನಾ ನಿಯಮ ಉಲ್ಲಂಘನೆ - ಗದಗ್​ನಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಚಾರ

ಒಮಿಕ್ರಾನ್ ಆತಂಕದ ನಡುವೆ ಪರಿಷತ್ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗದಗ್​ನಲ್ಲಿ ಮತಪ್ರಚಾರ ನಡೆಸಿದರು.

cm-basavaraja-bommai-council-election-campaign-in-gadag
ಪರಿಷತ್​ ಚುನಾವಣೆಗೆ ಸಿಎಂ, ಮಾಜಿ ಸಿಎಂ ಭರ್ಜರಿ ಪ್ರಚಾರ: ಕೊರೊನಾ ರೂಲ್ಸ್​ ಬ್ರೇಕ್
author img

By

Published : Dec 7, 2021, 7:56 AM IST

ಗದಗ​: ವಿಧಾನ ಪರಿಷತ್ ಚುನಾವಣೆಗೆ ಎಲ್ಲಾ ಪಕ್ಷಗಳು ಸರ್ಕಸ್ ನಡೆಸುತ್ತಿವೆ. ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಲುವಾಗಿ ರಾಜ್ಯದ ವಿವಿಧೆಡೆ ಸುತ್ತಿ ಪಕ್ಷಗಳ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಸೋಮವಾರ ಸಿಎಂ ಹಾಗೂ ಮಾಜಿ ಸಿಎಂ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಗದಗ್​ನಲ್ಲಿ ಮತಯಾಚಿಸಿದ್ದಾರೆ.

ಧಾರವಾಡ, ಗದಗ, ಹಾವೇರಿ ವಿಧಾನ ಪರಿಷತ್​ ಕ್ಷೇತ್ರದ ಚುನಾವಣೆ ಪ್ರಯುಕ್ತ ಗದಗ್ ನಗರದ ಅಂಬೇಡ್ಕರ್​ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಚಾರ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭಾಗಿಯಾಗಿದ್ದರು.

ಒಮಿಕ್ರಾನ್ ಭೀತಿಯ ನಡುವೆಯೂ ನಡೆದ ಸಭೆಯಲ್ಲಿ ನೂರಾರು ಮಂದಿ ಗ್ರಾಮ ಪಂಚಾಯಿತಿ ಸದಸ್ಯರು, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್​ನವರು ಸುವರ್ಣ ಗ್ರಾಮ ಯೋಜನೆಯನ್ನು ಹಳ್ಳ ಹಿಡಿಸಿದ್ದಾರೆ. ಸಿದ್ದರಾಮಯ್ಯ ಭಾಷಣ ಮಾಡ್ತಾರೆ, ಅದರಿಂದ ಹೊಟ್ಟೆ ತುಂಬುವುದಿಲ್ಲ. ಎಲ್ಲಾ ಅಧಿಕಾರವೂ ತನ್ನಲ್ಲಿಯೇ ಇರಬೇಕು ಎಂಬುದು ಕಾಂಗ್ರೆಸ್ ನೀತಿ ಎಂದು ಹರಿಹಾಯ್ದಿದ್ದಾರೆ.

ಚುನಾವಣೆ ಮೂರು ತಿಂಗಳಿದ್ದಂತೆ, 15 ಲಕ್ಷ ಮನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿತ್ತು. ಒಂದು ಮನೆಯನ್ನು ಕೊಟ್ಟಿಲ್ಲ. ವಾಜಪೇಯಿ ಕಾಲದಲ್ಲಿ 30 ಕೆಜಿ ಕೊಡ್ತಿದ್ದೆವು. ಕಾಂಗ್ರೆಸ್ ಬಂದ ಮೇಲೆ ಏಳು ಕೆಜಿಗೆ ಇಳಿಸಲಾಯಿತು ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಪ್ರಧಾನಿ ಮೋದಿ ಕೊರೊನಾ ನಿಯಂತ್ರಿಸಿದ ಪರಿಯನ್ನು ಜಗತ್ತೇ ಕೊಂಡಾಡಿದೆ. ಕೊರೊನಾ ಲಸಿಕೆಯನ್ನು ದೇಶದ ಜನರಿಗೆ ಉಚಿತವಾಗಿ ನೀಡುವ ನಿರ್ಧಾರವನ್ನು ಮೋದಿ ತೆಗೆದುಕೊಂಡಿದ್ದು, ಎಲ್ಲರಿಗೂ ನೆರವಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಕೊರೊನಾ ರೂಲ್ಸ್ ಬ್ರೇಕ್:

ಪ್ರಚಾರ ಸಭೆಯು ಒಮಿಕ್ರಾನ್ ಭೀತಿಯ ನಡುವೆ ನಡೆದಿದ್ದು, ಸಭೆಯಲ್ಲಿ ಯಾವುದೇ ಕೊರೊನಾ ಮಾರ್ಗಸೂಚಿಗಳು ಪಾಲನೆಯಾಗಲಿಲ್ಲ. ಸಿಎಂ, ಮಾಜಿ ಸಿಎಂ ಆದಿಯಾಗಿ ಅಲ್ಲಿ ನೆರೆದಿದ್ದ ಶಾಸಕರು, ಮುಖಂಡರು ಯಾರೂ ಕೂಡಾ ಕೊರೊನಾ ಮಾರ್ಗಸೂಚಿಯನ್ನು ಪಾಲನೆ ಮಾಡಿರಲಿಲ್ಲ. ಅಲ್ಲಿ ನೆರೆದಿದ್ದ ಜನರು, ಕಾರ್ಯಕರ್ತರಲ್ಲಿ ಕೆಲವರು ಮಾತ್ರವೇ ಮಾಸ್ಕ್ ಧರಿಸಿದ್ದರು. ಸರ್ಕಾರವೇ ಈ ರೀತಿಯಾಗಿ ಬೇಜವಾಬ್ದಾರಿಯಿಂದ ನಡೆದುಕೊಂಡರೆ, ಉಳಿದವರ ಪಾಡೇನು ಎಂಬುದು ಜನಸಾಮಾನ್ಯರ ಪ್ರಶ್ನೆ..

ಇದನ್ನೂ ಓದಿ: ಚಾಮುಂಡಿ, ವರುಣಾ ಬಿಟ್ಟು ಇಲ್ಲಿಗ್ಯಾಕೆ ಬಂದ್ರಿ.. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಚಿಮ್ಮನಕಟ್ಟಿ ಬಹಿರಂಗ ವಿರೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.