ಗದಗ: ನಮ್ಮ ಅವಧಿಯಲ್ಲಿ ಮಹಾದಾಯಿ ವಿವಾದಕ್ಕೆ ಖಂಡಿತವಾಗಿ ತಾರ್ಕಿಕ ಅಂತ್ಯ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿ ಮೀಸಲಾತಿಗೆ ಹೋರಾಟ ವಿಚಾರದ ಕುರಿತು ಮಾತನಾಡುತ್ತಾ, ಅವರು ಮೀಸಲಾತಿಗಾಗಿ ಹೋರಾಟ ಮಾಡೋದು ತಪ್ಪೇನೆಲ್ಲ. ಸರ್ಕಾರವಾಗಿ ನಾವು ಕಾನೂನು ಚೌಕಟ್ಟು ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ ಕೆಲಸ ಮಾಡುತ್ತೇವೆ. ಹಿಂದುಳಿದ ವರ್ಗಗಳ ಆಯೋಗದಿಂದ ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಪಡೆಯಲಾಗ್ತಿದೆ. ಆಯೋಗದ ರಿಪೋರ್ಟ್ ಬಂದ ಮೇಲೆ ಸರ್ಕಾರ ಮುಂದಿನ ಕೆಲಸ ಮಾಡುತ್ತೆ. ಬಸವ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆಗೂ ಸಂಪರ್ಕದಲ್ಲಿದ್ದೇನೆ. ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಲಿದ್ದೇನೆ ಎಂದರು.
ಈ ವೇಳೆ ಸಚಿವ ಸಿ.ಸಿ ಪಾಟೀಲ್, ಸಂಸದ ಶಿವಕುಮಾರ ಉದಾಸಿ, ಶಾಸಕ ಕಳಸಪ್ಪ ಬಂಡಿ, ಎಸ್.ವಿ ಸಂಕನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.