ಗದಗ: ಜಿಲ್ಲೆಯಾದ್ಯಂತ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪಡ್ಡೆ ಹುಡುಗರು ಮಾತ್ರ ಬಿಸಿಲಿನ ಬೇಗೆಯಿಂದ ಪಾರಾಗಲು ಸ್ವಿಮ್ಮಿಂಗ್ ಪೂಲ್ಗೆ ಲಗ್ಗೆ ಇಡುತ್ತಿದ್ದಾರೆ.
ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ನಗರ ಸಭೆಯ ಈಜುಕೊಳದಲ್ಲಿ ಚಿಣ್ಣರು, ಯುವಕರು ಈಜು ಹೊಡೆದು ಮಸ್ತ್ ಮಜಾ ಮಾಡುತ್ತಿದ್ದಾರೆ. ಮಕ್ಕಳಂತೂ ತಮ್ಮ ರಜೆಯ ದಿನಗಳನ್ನು ಇಲ್ಲಿಯೇ ಕಳೆಯುತ್ತಿದ್ದಾರೆ.
ಇದೇ ಮೊದಲ ಬಾರಿಗೆ ನಗರದಲ್ಲಿ ಸಾರ್ವಜನಿಕ ಸ್ವಿಮ್ಮಿಂಗ್ ಪೂಲ್ ನಿರ್ಮಾಣವಾಗಿ ಕಾರ್ಯಾರಂಭ ಮಾಡಿರೋದ್ರಿಂದ ಸಾರ್ವಜನಿಕರು ಕೂಡ ಸಂತಸ ವ್ಯಕ್ತ ಪಡಿಸಿದ್ದಾರೆ. ಇನ್ನು ಈಜು ಬಾರದವರು ಹಳ್ಳಿ ಶೈಲಿನಲ್ಲಿ ಬೆನ್ನಿಗೆ ಟ್ಯೂಬ್ ಕಟ್ಟಿಕೊಂಡು ಸ್ವಿಮ್ಮಿಂಗ್ ಕಲಿಯುತ್ತಿದ್ದಾರೆ.