ಗದಗ: ಕೋವಿಡ್ ಲಾಕ್‌ಡೌನ್ ಘೋಷಣೆಯಾದ ನಂತರ ಗದಗ ಮತಕ್ಷೇತ್ರದ ಜನರ ಸಂಕಷ್ಟ ನೀಗಿಸಲು ಟೊಂಕಕಟ್ಟಿ ನಿಂತಿದ್ದ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ತಮ್ಮ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿದ್ದಾರೆ.
ಲಾಕ್‌ಡೌನ್ ವೇಳೆ ಮನುಕುಲಕ್ಕಾಗಿ ಭಿಕ್ಷೆ ಅಭಿಯಾನ ಆರಂಭಿಸಿದ್ದ ಅನಿಲ್ ಮೆಣಸಿನಕಾಯಿ, ರೈತರ ಬಳಿ ದಾನ-ಧರ್ಮ ಬೇಡಿ ಸುಮಾರು 15,000 ಬಡವರಿಗೆ ಆಹಾರದ ಕಿಟ್ ಮತ್ತು ಇನ್ನಿತರ ವಸ್ತುಗಳನ್ನು ನೀಡಿದ್ದರು.
ಈಗ ಗದಗ ನಗರದಲ್ಲಿನ ಒಂದು ಸರ್ಕಾರಿ ಶಾಲೆ ಮತ್ತು ಗದಗ ಗ್ರಾಮೀಣ ಭಾಗದ ಮತ್ತೊಂದು ಸರ್ಕಾರಿ ಶಾಲೆಗಳನ್ನ ದತ್ತು ಪಡೆದು ಅವುಗಳ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದಾರೆ. ಇಂದು ಅಧಿಕೃತವಾಗಿ ಶಿಕ್ಷಣಾಧಿಕಾರಿಗಳ ಪತ್ರಕ್ಕೆ ಸಹಿ ಹಾಕಿ ದತ್ತು ಸ್ವೀಕಾರ ಮಾಡಿದರು.
ಈ ವೇಳೆ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಶಿವಕುಮಾರ್ ಉದಾಸಿ, ಶಾಸಕ ಕಳಕಪ್ಪ ಬಂಡಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅನಿಲ್ ಮೆಣಸಿನಕಾಯಿ ಅವರ ಕಾರ್ಯಕ್ಕೆ ಸ್ಥಳೀಯರು ಸೇರಿದಂತೆ ಪಕ್ಷದ ಮುಖಂಡರು ಶ್ಲಾಘನೆ ವ್ಯಕ್ತಪಡಿಸಿದರು.