ಗದಗ : ಚಲಿಸುತ್ತಿದ್ದ ವೇಳೆ ಬೈಕ್ ಸ್ಕೀಡ್ ಆದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನರಗುಂದ ಪಟ್ಟಣದಲ್ಲಿ ನಡೆದಿದೆ.
ವಿನಾಯಕ ಐನಾಪೂರ (15) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈತ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದವನಾಗಿದ್ದು, ನರಗುಂದದಿಂದ ಭೈರನಹಟ್ಟಿ ಗ್ರಾಮಕ್ಕೆ ತೆರಳುವಾಗ ಪಟ್ಟಣದ ಸೋಮಾಪೂರ ಬಡಾವಣೆಯ ಹನುಮಂತ ದೇವಸ್ಥಾನದ ಬಳಿ ಈ ಅವಘಡ ಸಂಭವಿಸಿದೆ.
ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.