ಗದಗ: ಲಾರಿ ಮತ್ತು ಬೈಕ್ ಮುಖಾಮುಖಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ್ ಹೆಲ್ತ್ಕ್ಯಾಂಪ್ ಬಳಿ ನಡೆದಿದೆ.
ಬೈಕ್ ಸವಾರ ರೋಷನ ಅಲಿ (45 ) ಮೃತಪಟ್ಟ ವ್ಯಕ್ತಿ. ಮೃತನ ಸ್ನೇಹಿತ ರವಿ ಎಂಬಾತ ಕೂಡ ಗಾಯಗೊಂಡಿದ್ದಾರೆ.
ಇಬ್ಬರು ರೋಣ ತಾಲೂಕಿನ ಕೋಟುಮಚಗಿ ಗ್ರಾಮದವರಾಗಿದ್ದಾರೆ. ಇನ್ನು ಮೃತ ರೋಷನ್ ಅಲಿ ಕೆಎಸ್ಆರ್ಟಿಸಿಯ ಗದಗ ಡಿಪೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಮುಂಜಾನೆ ಕರ್ತವ್ಯಕ್ಕೆ ಹಾಜರಾಗಲು ಕೋಟುಮಚಗಿ ಗ್ರಾಮದಿಂದ ಬರುವಾಗ ಈ ಅಪಘಾತ ಸಂಭವಿಸಿದೆ. ಈ ಕುರಿತು ಗದಗ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.