ಗದಗ: ಮೂರು ಸಾವಿರ ಮಠದ ಅಧಿಕಾರದ ವಿಚಾರಕ್ಕೆ ಯಾರೂ ಅಡ್ಡ ಬಂದಿಲ್ಲ. ಕೊರೊನಾ ಅಡ್ಡಿಯಾಗಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಮಠಕ್ಕೆ ಇಂದು ಡಿ.ಕೆ.ಶಿವಕುಮಾರ್ ಭೇಟಿ ವಿಚಾರವಾಗಿ ಮಾತನಾಡಿದ ಅವರು. ಡಿ.ಕೆ.ಶಿವಕುಮಾರ್ ಭೇಟಿ ಕೇವಲ ಸೌಜನ್ಯ ಭೇಟಿಯಾಗಿತ್ತು. ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ. ಇದು ಕೇವಲ ತಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಸಂಬಂಧಿಸಿದ ಚರ್ಚೆ ನಡೆಯಿತು ಎಂದು ತಿಳಿಸಿದರು.
ವೀರಶೈವ, ಲಿಂಗಾಯತ ಪ್ರತ್ಯೇಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಸಮಾಜ ಒಡೆಯುವ ಕೆಲಸ ಯಾರೂ ಮಾಡಬಾರದು. ಅದರಿಂದ ದುಷ್ಪರಿಣಾಮ ಆಗುತ್ತದೆ. ಪಕ್ಷಕ್ಕಾಗಲಿ, ನಾಯಕತ್ವಕ್ಕಾಗಲಿ ಅದು ಧಕ್ಕೆಯಾಗುತ್ತದೆ. ಬಹಿರಂಗ ಸಭೆಯಲ್ಲಿ ಕ್ಷಮೆ ಕೇಳಿದ ದಿನವೇ ವೀರಶೈವ ಲಿಂಗಾಯತ ಮುಗಿದು ಹೋಗಿದೆ. ಧರ್ಮದ ವಿಚಾರದಲ್ಲಿ ರಾಜಕಾರಣ ಹಸ್ತಕ್ಷೇಪ ಮಾಡಬಾರದು ಎಂಬುದು ನನ್ನ ಸಲಹೆಯಾಗಿತ್ತು. ಅದನ್ನೆ ಡಿಕೆಶಿಯವರು ಸತ್ಯದ ಮಾತು ಎಂದು ಒಪ್ಪಿಕೊಂಡಿದ್ದಾರೆ ಎಂದು ಸ್ವಾಮೀಜಿ ಹೇಳಿದರು.
ಮೂರು ಸಾವಿರ ಮಠದ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿ, ಮೂರು ಸಾವಿರ ಮಠದ ಅಧಿಕಾರಕ್ಕೆ ಯಾರೂ ಅಡ್ಡಿಯಾಗಿಲ್ಲ. ಸದ್ಯ ಕೊರೊನಾ ಅಡ್ಡಿಯಾಗಿದೆ. ಕೊರೊನಾ ಹೋದ ತಕ್ಷಣ ಮೂರುಸಾವಿರ ಮಠದ ಸಮಸ್ಯೆಯೂ ಸರಿಯಾಗುತ್ತದೆ ಎಂದರು.