ETV Bharat / state

ಮನೆಯಲ್ಲಿ ಸಾಕಿದ ಹಸುವಿಗೆ ಸೀಮಂತ ಕಾರ್ಯ ಮಾಡಿದ ಕುಟುಂಬ - ಗದಗ ಲೇಟೆಸ್ಟ್ ನ್ಯೂಸ್

ಇದೇ ಸಂತೋಷದಲ್ಲಿ ಶ್ರೀಕಾಂತ್ ಮನೆಯವರು ಗರ್ಭಿಣಿಗೆ ನಡೆಸುವ ಸೀಮಂತ ಕಾರ್ಯದಂತೆ ಹಸುವಿಗೆ ರೇಷ್ಮೆ ಸೀರೆ, ಹಸಿರುಬಳೆ ತೊಡಸಿ, ಕೊರಳಿಗೆ ಹೂ ಮಾಲೆ ಹಾಕಿ ಕಾಲಿಗೆ ಗೆಜ್ಜೆ ಕಟ್ಟಿ ಶೃಂಗಾರ ಮಾಡಿ ಕಾಮಧೇನುವಿಗೆ ತಮ್ಮ ಮನೆಯ ಮಗಳಂತೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ಮಾಡಿದರು..

Baby shower function made cattle
ಹಸುವಿಗೆ ಸೀಮಂತ ಕಾರ್ಯ
author img

By

Published : Jul 3, 2021, 9:19 PM IST

ಗದಗ : ಮನೆಯಲ್ಲಿ ಸಾಕಿದ ಹಸುವಿಗೆ ಅದ್ದೂರಿಯಾಗಿ ಮನೆಯವರು ಸೀಮಂತ ಕಾರ್ಯ ಮಾಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ನಡೆದಿದೆ. ಮೆಣಸಗಿ ಗ್ರಾಮದ ಶ್ರೀಕಾಂತ್ ಗೂರಮ್ಮಣ್ಣವರ್ ಎಂಬುವರ ಮನೆಯಲ್ಲಿ ಸಾಕಿದ್ದ ಗೌರಿ ಎಂಬ ಹೆಸರಿನ ಹಸುವಿಗೆ ಅದ್ದೂರಿಯಾಗಿ ಸೀಮಂತ ಕಾರ್ಯ ನೆರವೇರಿಸಿದ್ದಾರೆ. 7 ವರ್ಷದ ನಂತರ ಗೌರಿ (ಹಸು) ಗರ್ಭ ಧರಿಸಿರುವುದರಿಂದ ಶ್ರೀಕಾಂತ್ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು.

ಇದೇ ಸಂತೋಷದಲ್ಲಿ ಶ್ರೀಕಾಂತ್ ಮನೆಯವರು ಗರ್ಭಿಣಿಗೆ ನಡೆಸುವ ಸೀಮಂತ ಕಾರ್ಯದಂತೆ ಹಸುವಿಗೆ ರೇಷ್ಮೆ ಸೀರೆ, ಹಸಿರುಬಳೆ ತೊಡಸಿ, ಕೊರಳಿಗೆ ಹೂ ಮಾಲೆ ಹಾಕಿ ಕಾಲಿಗೆ ಗೆಜ್ಜೆ ಕಟ್ಟಿ ಶೃಂಗಾರ ಮಾಡಿ ಕಾಮಧೇನುವಿಗೆ ತಮ್ಮ ಮನೆಯ ಮಗಳಂತೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ಮಾಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮದ ಅನೇಕ ಮಂದಿ ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.