ETV Bharat / state

ತಂದೆ ಯಡಿಯೂರಪ್ಪ ರಾಜೀನಾಮೆ ನಂತರ ನನಗೆ ಹಿನ್ನಡೆ ಆಗಿಲ್ಲ : ಬಿ ವೈ ವಿಜಯೇಂದ್ರ - ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ

ಯಡಿಯೂರಪ್ಪ ಎಂದೂ ಹಿಂದೆ ನಿಂತು ರಾಜಕೀಯ ಮಾಡಿದವರಲ್ಲ-ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನಂತರ ನನಗೆ ಹಿನ್ನಡೆ ಅಗಿದೆ ಅನ್ನೋದು ಸತ್ಯಕ್ಕೆ ದೂರದ ಮಾತು-ಮಹದಾಯಿ ಬಗ್ಗೆ ಕೇಂದ್ರಕ್ಕೆ ರಾಜ್ಯ ನಾಯಕರು ಮನವರಿಕೆ ಮಾಡಿದ್ದಾರೆ ಎಂದ ಬಿ ವೈ ವಿಜಯೇಂದ್ರ

b-y-vijayendra-reaction-about-amit-shah-state-visit
ಬಿವೈ ವಿಜಯೇಂದ್ರ
author img

By

Published : Jan 1, 2023, 6:41 PM IST

ತಂದೆ ರಾಜೀನಾಮೆ ನಂತರ ನನಗೆ ಹಿನ್ನಡೆ ಆಗಿಲ್ಲ ಎಂದು ಸ್ಪಷ್ಟಪಡಿಸಿ ಬಿವೈ ವಿಜಯೇಂದ್ರ

ಗದಗ: ಪಕ್ಷ ನನಗೆ ರಾಜ್ಯ ಉಪಾಧ್ಯಕ್ಷನ ಜವಾಬ್ದಾರಿಯ ಸ್ಥಾನ ಕೊಟ್ಟಿದೆ. ಯಡಿಯೂರಪ್ಪ ಅವರ ಮಗ ಅನ್ನೋ ಬಗ್ಗೆ ಹೆಮ್ಮೆಯಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಮಗ ಅನ್ನೋ ಕಾರಣಕ್ಕೆ ಕಾರ್ಯಕರ್ತರು ಪ್ರೀತಿಯಿಂದ ಕಾಣುತ್ತಾರೆ. ಇದೆಲ್ಲದರ ಒಟ್ಟಿಗೆ ನಾನೂ ಕೂಡ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ನನಗೆ ಹಿನ್ನಡೆ ಆಗಿಲ್ಲ: ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲೆ ವಿಜಯೇಂದ್ರ ಅವರಿಗೆ ಹಿನ್ನಡೆ ಅಗಿದೆ ಅನ್ನೋದು ಸತ್ಯಕ್ಕೆ ದೂರದ ಮಾತು. ಅಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಅವರ ನೇತೃತ್ವದಲ್ಲಿ ಸಂಘಟನೆ ನಡೆಯುತ್ತಿದೆ ಎಂದು ಹೇಳಿದರು.

ಯಡಿಯೂರಪ್ಪ ಹಿಂದೆ ನಿಂತು ರಾಜಕೀಯ ಮಾಡಿದವರಲ್ಲ: ವಿಪಕ್ಷದವರೂ ಯಡಿಯೂರಪ್ಪ ಅವರ ಬಗ್ಗೆ ಒಳ್ಳೆಯ ಮಾತಾಡುತ್ತಾರೆ. ಅದೇ ರೀತಿ ಜನಾರ್ದನ ರೆಡ್ಡಿ ಅವರೂ ಒಳ್ಳೆಯ ಮಾತನಾಡುತ್ತಾರೆ. ಇದರ ಅರ್ಥ ರೆಡ್ಡಿ ಪಕ್ಷಕ್ಕೆ ಯಡಿಯೂರಪ್ಪ ಅವರ ಬೆಂಬಲ ಇದೆ ಅಂತಲ್ಲ. ಯಡಿಯೂರಪ್ಪ ಅವರು ಹಿಂದೆ ನಿಂತು ರಾಜಕೀಯ ಮಾಡಿದವರಲ್ಲ. ನೇರವಾಗಿ ರಾಜಕಾರಣ ಮಾಡುವ ಎದೆಗಾರಿಕೆ ಯಡಿಯೂರಪ್ಪ ಅವರಿಗೆ ಇದೆ ಎಂದು ಹೇಳಿದರು.

ವಿದೇಶ ಪ್ರವಾಸ ಪೂರ್ವ ನಿಯೋಜಿತ: ಯಡಿಯೂರಪ್ಪ ಅವರ ವಿದೇಶ ಪ್ರವಾಸ ಪೂರ್ವ ನಿಯೋಜಿತವಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮ ವಾರದ ಹಿಂದೆ ತೀರ್ಮಾನ ಆಗಿದ್ದು, ಅಸಮಾಧಾನದ ಬಗ್ಗೆ ಹರಿದಾಡುತ್ತಿರುವ ಮಾತು ಸತ್ಯಕ್ಕೆ ದೂರವಾದದ್ದು. ಯಡಿಯೂರಪ್ಪ ಅವರು ಅಮಿತ್​ ಶಾ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಗೊಂದಲಕ್ಕೆ ಅವಕಾಶ ಇಲ್ಲ. ಯಡಿಯೂರಪ್ಪ ಸಂತೋಷದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಮಹದಾಯಿ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಲಾಗಿದೆ: ರಾಜ್ಯದಲ್ಲಿ, ದೇಶದಲ್ಲಿ ಇಷ್ಟು ವರ್ಷ ಯಾರು ಅಧಿಕಾರದಲ್ಲಿದ್ದರು ಅನ್ನೋದು ಜನರಿಗೆ ಗೊತ್ತಿದೆ. ರಾಜ್ಯದ ಜ್ವಲಂತ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ಪಕ್ಷ ಶ್ರಮಿಸಿದೆ. ಮಹದಾಯಿ ವಿಷಯದಲ್ಲಿ ಕೇಂದ್ರಕ್ಕೆ ಮನವರಿಗೆ ಮಾಡುವಲ್ಲಿ ರಾಜ್ಯ ನಾಯಕರು ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಮಹದಾಯಿ ಕಾಮಗಾರಿ ಆರಂಭವಾಗಲಿದೆ. ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುವ ಪ್ರಶ್ನೆ ಇಲ್ಲ ಎಂದು ಇದೇ ವೇಳೆ ಬಿ ವೈ ವಿಜಯೇಂದ್ರ ಅವರು ಸ್ಪಷ್ಟಪಡಿಸಿದರು.

ಕಾರಣಾಂತರದಿಂದ ತಡ: ಪಕ್ಷ ಕರೆದ ಸಭೆಗೆ ಹಾಜರಾಗಬೇಕಾದದ್ದು ನನ್ನ ಕರ್ತವ್ಯ. ಕಾರಣಾಂತರಗಳಿಂದ ಸರಿಯಾದ ಸಮಯಕ್ಕೆ ತಲುಪಲಾಗಲಿಲ್ಲ ಎಂದು ತಡವಾಗಿಬಂದ ಬಗ್ಗೆ ಹೇಳಿಕೊಂಡರು.

ಇದನ್ನೂ ಓದಿ: 'ಮೀಸಲಾತಿಯಲ್ಲಿ ಗೊಂದಲವಿಲ್ಲ': ಮಹದಾಯಿ ಕಾಮಗಾರಿ ಆರಂಭದ ಬಗ್ಗೆ ಬೊಮ್ಮಾಯಿ ಭರವಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.