ETV Bharat / state

ಗ್ರಾಮದ ರಕ್ಷಣೆಗೆ ತಾವೇ ಲಾಠಿ ಹಿಡಿದ ಆಶಾ ಕಾರ್ಯಕರ್ತೆಯರು‌...

ಕೈಯಲ್ಲಿ ಲಾಠಿ ಹಿಡಿದು ಗ್ರಾಮದಲ್ಲಿ ಮಾಸ್ಕ್​ ಧರಿಸದೆ ಬೇಕಾ ಬಿಟ್ಟಿಯಾಗಿ ಓಡಾಡುತ್ತಿರುವ ಬೈಕ್ ಸವಾರರಿಗೆ ಪಾಠ ಕಲ್ಲಿಸುತ್ತಿದ್ದಾರೆ.

Asha activists
ಆಶಾ ಕಾರ್ಯಕರ್ತೆಯರು‌
author img

By

Published : Apr 11, 2020, 10:21 AM IST

ಗದಗ : ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಕೊರೊನಾ ಲಾಕ್‌ಡೌನ್ ಆದೇಶ‌ ಜಾರಿಯಾಗಿದೆ. ಇದರ ನಡುವೆಯೂ ಬೀದಿಗೆ ಬಂದ ಯುವಕರಿಗೆ ಮಾಸ್ಕ್​ ಹಾಕಿಕೊಳ್ಳುವಂತೆ ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸುತ್ತಿದ್ದಾರೆ.

ರೋಣ ತಾಲೂಕಿನ ಮಾರನಬಸರಿ ಗ್ರಾಮದ ಆಶಾ ಕಾರ್ಯಕರ್ತೆಯರು ಈ ಕಾರ್ಯ ಮಾಡುತ್ತಿದ್ದಾರೆ. ಕೈಯಲ್ಲಿ ಲಾಠಿ ಹಿಡಿದು ಗ್ರಾಮದಲ್ಲಿ ಮಾಸ್ಕ್​ ಧರಿಸದೆ ಬೇಕಾ ಬಿಟ್ಟಿಯಾಗಿ ಓಡಾಡುತ್ತಿರುವ ಬೈಕ್ ಸವಾರರಿಗೆ ಪಾಠ ಕಲ್ಲಿಸುತ್ತಿದ್ದಾರೆ.

ಗ್ರಾಮದ ರಕ್ಷಣೆಗೆ ನಿಂತ ಆಶಾ ಕಾರ್ಯಕರ್ತೆಯರು..

ಮಹಾಮಾರಿ ಕೊರೊನಾ ವೈರಸ್​ಗೆ ಈಗಾಗಲೇ ಗದಗ ಜಿಲ್ಲೆಗೆ ಲಗ್ಗೆ ಇಟ್ಟು 80 ವರ್ಷದ ವೃದ್ಧೆಯನ್ನು ಬಲಿ ಪೆಡೆದಿದೆ. ಹಾಗಾಗಿ ಆಶಾ ಕಾರ್ಯಕರ್ತೆಯರು ಸಹ ಗ್ರಾಮದ ಜನರ ರಕ್ಷೆಣೆಗೋಸ್ಕರ ತಾವೇ ಕೈಯಲ್ಲಿ ಲಾಠಿ ಹಿಡಿದು ಮಾಸ್ಕ್​ ಇಲ್ಲದೇ ಸಂಚರಿಸುವವರಿಗೆ ನೀತಿ ಪಾಠ ಸಹ ಹೇಳುತ್ತಿದ್ದಾರೆ. ಮಾಸ್ಕ್​ ಇಲ್ಲದ ಯುವಕರಿಗೆ ತಮ್ಮ ಅಂಗಿಯನ್ನೇ ಕಟ್ಟಿಕೊಂಡ ಹೋಗುವಂತೆ ತಿಳಿ ಹೇಳಿದ್ದಾರೆ.

ಗ್ರಾಮಕ್ಕೆ ತಾವೇ ಪೊಲೀಸ್ ಸಿಬ್ಬಂದಿಯಂತೆ ಆಶಾ ಕಾರ್ಯಕರ್ತೆಯರು ಜನರ ರಕ್ಷಣೆಗೆ ನಿಂತಿರುವುದು ಮಾತ್ರ ಶ್ಲಾಘನೀಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.