ETV Bharat / state

ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಶಿರೋಳದ ಆಂಜನೇಯ ಸ್ವಾಮಿ ದೇವಸ್ಥಾನ

ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿರೋ ಆಂಜನೇಯ ದೇವಸ್ಥಾನ ಕೊಚ್ಚಿ ಹೋಗಿದೆ.

ಶಿರೋಳದ ಆಂಜನೇಯ ಸ್ವಾಮಿ ದೇವಸ್ಥಾನ
author img

By

Published : Sep 7, 2019, 6:41 PM IST

Updated : Sep 10, 2019, 11:28 PM IST

ಗದಗ: ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿರೋ ಆಂಜನೇಯ ದೇವಸ್ಥಾನ ಕೊಚ್ಚಿ ಹೋಗಿದೆ. ಇಂದು ಶನಿವಾರವಾದ ಕಾರಣ ಭಕ್ತರು ಹೊಳೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲು ಹೋದಾಗ ನೀರಿನ ರಭಸಕ್ಕೆ ಆಂಜನೇಯನ ದೇವಸ್ಥಾನ ಕೊಚ್ಚಿ ಹೋಗಿರುವುದು ಗೊತ್ತಾಗಿದೆ.

ಶಿರೋಳದ ಆಂಜನೇಯ ಸ್ವಾಮಿ ದೇವಸ್ಥಾನ

ನಿನ್ನೆಯಿಂದಲೂ ತುಂಬಿ ಹರಿಯುತ್ತಿದ್ದ ಮಲಾಪ್ರಭಾ ನದಿ ನೀರು ಶಿರೋಳ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಹಾಗಾಗಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ನಿನ್ನೆಯೇ ಅವಸರದಿಮದ ನಿಮಜ್ಜನ ಮಾಡಲಾಗಿತ್ತು.

ದೇವರಿಗೆ ಪ್ರವಾಹ ಕಾಡುತ್ತಿದೆ. ಇನ್ನು ಜನರಿಗೆ ಬಿಡುತ್ತಾ ಎಂದು ಜನರು ಪರಿಸ್ಥಿತಿ ನೆನೆದು ಪರಿತಪಿಸುತ್ತಿದ್ದಾರೆ.

Intro:ಗದಗ

ಆ್ಯಂಕರ್- ತಿಂಗಳು ಹಿಂದಷ್ಟೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಕಾಣಿಸಿಕೊಂಡಿತ್ತು. ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡು ಅವರ ಬದುಕು ಬೀದಿಗೆ ಬಂದಿತ್ತು. ಆದರೆ ಇದೀಗ ಮತ್ತೊಮ್ಮೆ ಪ್ರವಾಹ ಪ್ರಹಾರ ನಡೆಸೋಕೆ ಹೊಂಚು ಹಾಕ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಬಿಟ್ಟುಬಿಡದೇ ಮಳೆ ಸುರಿಯುತ್ತಿದ್ದು ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ಪರಿಣಾಮ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಲವು ಗ್ರಾಮಗಳು ಮುಳಗಡೆಯಾಗ್ತಿವೆ. ಆದರೆ ಇಂಥ ಸಂಕಷ್ಟಗಳನ್ನು ದೂರ ಮಾಡಬೇಕಾದ ದೇವರುಗಳಿಗೆ ಈ ಬಾರಿ ಪ್ರವಾಹ ಸಂಕಷ್ಟ ತಂದೊಡ್ಡಿದೆ. ನಿನ್ನೆ ತಾನೆ ಪ್ರವಾಹಕ್ಕೆ ಹೆದರಿ ಗ್ರಾಮಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿಗಳನ್ನು ಅಲ್ಲಿಯೇ ಬಿಟ್ಟು ಗ್ರಾಮಸ್ಥರು ಓಡಿ ಬಂದಿದ್ರು. ಅಲ್ಲದೇ ಸಂಜೆ ವಿಸರ್ಜಿಸಬೇಕಾದ ಗಣಪನ ಮೂರ್ತಿಗಳನ್ನು ಅವಸರವಸರವಾಗಿ ಮಧ್ಹ್ಯಾಹ್ನವೇ ಕಳಿಸಲಾಗಿತ್ತು. ಅದರಂತೆಯೇ ಇಂದೂ ಸಹ ಭಕ್ತರ ಪ್ರೀಯ ಶನಿವಾರದ ದೇವರು ಹೊಳೆ ಆಂಜನೇಯ ದೇವಸ್ಥಾನ ಈ ಪ್ರವಾಹಕ್ಕೆ ಕೊಚ್ಚಿಯೇ ಹೋಗಿದೆ.ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿರೋ ಆಂಜನೇಯ ದೇವಸ್ಥಾನ ಕೊಚ್ಚಿ ಹೋಗಿದ್ದು ಆಂಜನೇಯನಿಗೆ ಪ್ರತಿ ಶನಿವಾರ ವಿಶೇಷವಾಗಿ ಕಾರಣ ಭಕ್ತರು ವಿಶೇಷ ಪೂಜಾ ಕೈಂಕರ್ಯ ಸಲ್ಲಿಸುತ್ತಿದ್ರು.ಆ ಪ್ರಕಾರ ಇಂದು ಪೂಜೆ ಸಲ್ಲಿಸಲಿಕ್ಕೆ ಹೋದ್ರೆ ಆಂಜನೇಯನೇ ಇಲ್ಲದಂತಾಗಿದೆ. ಕೊಚ್ಚಿಹೋದ ದೇವಸ್ಥಾನ ನೋಡಿ ಗ್ರಾಮಸ್ಥರು ಭಯಗೊಂಡಿದ್ದಾರೆ.ನಮ್ಮನ್ನು ರಕ್ಷಣೆ ಮಾಡಬೇಕಿದ್ದ ದೇವರಿಗೆ ನೆ ಜಲಕಂಟಕ ಎದುರಾದ್ರೆ ಇನ್ನು ನಮ್ಮಂಥ ಜನಸಾಮಾನ್ಯರ ಪಾಡೇನು ಅಂತ ಗ್ರಾಮಸ್ಥರು ಆತಂಕದಲ್ಲಿ ದಿನ ದೂಡ್ತಿದಾರೆ.Body:ಗದಗConclusion:ಗದಗ
Last Updated : Sep 10, 2019, 11:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.