ಗದಗ: ನಾನು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಿದ್ದೇನೆ. ಇದು ರಾಜಕೀಯ ಸಿನಿಮಾ ಅಲ್ಲಾ, ಸತ್ಯ ಘಟನೆ ತೋರಿಸಿರುವ ಚಿತ್ರ. ಈ ವಿಚಾರದಲ್ಲಿ ಯಾರು ರಾಜಕೀಯ ಮಾಡಬೇಡಿ ಅಂತಾ ಚಿತ್ರ ನಟಿ ತಾರಾ ಅನುರಾಧಾ ಹೇಳಿದರು.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಲ್ಲಿ ರಾಜಕೀಯ ಬೆರೆಸಬೇಡಿ, ಪೈರಸಿ ಮಾಡಬೇಡಿ. ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಈ ಸಿನಿಮಾದಲ್ಲಿ ನೋಡಿದಾಗ ಮೈ ಜುಮ್ ಎನ್ನಿಸಿತು. ಈ ಸಿನಿಮಾವನ್ನ ನೋಡಿದಾಗ ಒಂದು ರೀತಿಯ ಆಕ್ರೋಶ, ದುಃಖ ಕೂಡ ಆಗುತ್ತದೆ. ಆ ಟೈಮ್ನಲ್ಲಿ ಸರ್ಕಾರ ಯಾಕೆ ಕೈಕಟ್ಟಿ ಕೂತಿದ್ದವು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ರಾಷ್ಟ್ರ ಅಂತಾ ಇರೋದು ಭಾರತ ಒಂದೇ. ನಾವೂ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಹೇಗೆ?, ನಾವು ಎಚ್ಚೆತ್ತುಕೊಳ್ಳದಿದ್ದರೆ ಕಾಶ್ಮೀರದ ಭಯಂಕರ ಸತ್ಯ ಇಡೀ ದೇಶಕ್ಕೆ ಹಬ್ಬುತ್ತಿತ್ತೇನೋ. ಮಹಿಳೆಯರ ಮೇಲಾಗ್ತಿರೋ ದೌರ್ಜನ್ಯ ನೋಡಿದರೆ ಇನ್ನೂ ಎಚ್ಚೆತ್ತಿಲ್ಲ ಅನಿಸುತ್ತೆ. ಪೈರಸಿ ತಡೆಗೆ ಸರ್ಕಾರ ಮತ್ತಷ್ಟು ಕಠಿಣ ನಿಯಮ ತರಲಿ ಅಂತ ನಟಿ ತಾರಾ ಸರ್ಕಾರಕ್ಕೆ ಒತ್ತಾಯಿಸಿದರು.
ಇದನ್ನೂ ಓದಿ: 'ಕಾಶ್ಮೀರ್ ಫೈಲ್ಸ್' ನೋಡಿದ ಬಳಿಕ ದುಃಖ ತಡೆಯಲಾಗುತ್ತಿಲ್ಲ: ಸಚಿವ ಕೆಎಸ್ಈ