ETV Bharat / state

ಗದಗ: 4 ವರ್ಷದ ಮಗುವಿನೊಂದಿಗೆ ನದಿಗೆ ಹಾರಿದ ತಾಯಿ: ಅಮ್ಮನ ಕೈಯಿಂದ ತಪ್ಪಿಸಿಕೊಂಡ ಇಬ್ಬರು ಮಕ್ಕಳು ಬಚಾವ್​! - gadag mother suicide news

ಮೂವರು ಮಕ್ಕಳ ಸಮೇತ ತಾಯಿಯೊಬ್ಬಳು ನದಿಗೆ ಹಾರಲು ಬಂದಿದ್ದು, ಈ ವೇಳೆ, ಇಬ್ಬರು ಮಕ್ಕಳು ತಪ್ಪಿಸಿಕೊಂಡು ಪಾರಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

A mother jumped into the river with her 4 year old child
4 ವರ್ಷದ ಮಗುವಿನೊಂದಿಗೆ ನದಿಗೆ ಹಾರಿದ ತಾಯಿ
author img

By

Published : Sep 29, 2021, 10:48 AM IST

Updated : Sep 29, 2021, 11:47 AM IST

ಗದಗ : ತಾಯಿ ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಲು ಬಂದಿದ್ದಾಳೆ. ಈ ವೇಳೆ, ಇಬ್ಬರು ಮಕ್ಕಳು ಅಮ್ಮನಿಂದ ತಪ್ಪಿಸಿಕೊಂಡಿದ್ದು, 4 ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ರೋಣ ತಾಲೂಕಿನ ಹೋಳೆ ಆಲೂರು ಗ್ರಾಮದ ಮಲಪ್ರಭಾ ನದಿಯಲ್ಲಿ ಈ ಘಟನೆ ಸಂಭವಿಸಿದೆ. ಉಮಾದೇವಿ (45) ತನ್ನ 4 ವರ್ಷದ ಹೆಣ್ಣು ಮಗುವಿನೊಂದಿಗೆ ನದಿಗೆ ಹಾರಿದ್ದಾರೆ. ಮೂರು ತಿಂಗಳ ಹಿಂದೆ ಈಕೆಯ ಪತಿ ಸಂಗಮೇಶ ಚಲ್ಲಿಕೇರಿ ಕೋವಿಡ್​ನಿಂದ ಸಾವನ್ನಪ್ಪಿದ್ದರು. ಪತಿ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪುಟ್ಟ ಮಗುವಿನೊಂದಿಗೆ ನದಿಗೆ ಹಾರಿದ ತಾಯಿ

ಉಮಾದೇವಿ ಮೂರು ಮಕ್ಕಳ ಸಮೇತ ನದಿಗೆ ಹಾರಲು ಯತ್ನಿಸಿದಾಗ 12 ಹಾಗೂ 14 ವರ್ಷದ ಮಕ್ಕಳಿಬ್ಬರು ತಾಯಿಯಿಂದ ತಪ್ಪಿಸಿಕೊಂಡು ಓಡಿಬಂದಿದ್ದಾರೆ. ಇನ್ನೊಬ್ಬ ಮಗಳು ಗದಗದ ಕಾಲೇಜೊಂದರಲ್ಲಿ ಓದುತ್ತಿದ್ದಾಳೆ.

ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ತಾಯಿ, ಮಗುವಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Last Updated : Sep 29, 2021, 11:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.