ETV Bharat / state

ಕ್ಷುಲ್ಲಕ ಕಾರಣಕ್ಕೆ‌ ಮಹಿಳೆಯರ ಮೇಲೆ ಹಲ್ಲೆ: ಗ್ರಾ.ಪಂ. ಸದಸ್ಯನ ವಿರುದ್ಧ ಗ್ರಾಮಸ್ಥರ ಆಕ್ರೋಶ - ಕ್ಷುಲ್ಲಕ ಕಾರಣಕ್ಕೆ‌ ಮಹಿಳೆಯರ ಮೇಲೆ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಆತನ ಕುಟುಂಬಸ್ಥರ ಹಲ್ಲೆ

ಲಾಕ್​ಡೌನ್​ ಸಮಯದಲ್ಲಿ ಕ್ಷುಲ್ಲಕ ಕಾರಣಕ್ಕೆ‌ ಮಹಿಳೆಯರ ಮೇಲೆ ಗ್ರಾಮ ಪಂಚಾಯತ್​ ಸದಸ್ಯ ಹಾಗೂ ಆತನ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಕ್ಷುಲ್ಲಕ ಕಾರಣಕ್ಕೆ‌ ಮಹಿಳೆಯರ ಮೇಲೆ ಹಲ್ಲೆ ಆರೋಪ

author img

By

Published : Apr 18, 2020, 11:15 AM IST

ಗದಗ: ಕ್ಷುಲಕ ಕಾರಣಕ್ಕೆ ಗ್ರಾಮ ಪಂಚಾಯತ್​ ಸದಸ್ಯ ಹಾಗೂ ಆತನ ಕುಟುಂಬದ ಸದಸ್ಯರು ಸೇರಿಕೊಂಡು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿ ಶಿರೂರು ಗ್ರಾಮದಲ್ಲಿ ಕೇಳಿಬಂದಿದೆ.

ಕ್ಷುಲ್ಲಕ ಕಾರಣಕ್ಕೆ‌ ಮಹಿಳೆಯರ ಮೇಲೆ ಹಲ್ಲೆ ಆರೋಪ

ಖಾಲಿ ಜಾಗದಲ್ಲಿ ಕಟ್ಟಿಗೆ ಇಟ್ಟಿದ್ದಕ್ಕಾಗಿ ಮಹಿಳೆಯರ‌ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗ್ತಿದೆ. ಗ್ರಾ. ಪಂ ಸದಸ್ಯ ಯಲ್ಲಪ್ಪ ಗುಡಿ, ಅವರ ಮಕ್ಕಳಾದ ಪ್ರಶಾಂತ್, ಶರಣಪ್ಪ, ಪತ್ನಿ ನಿರ್ಮಲಾ ಸೇರಿಕೊಂಡು, ನಾಲ್ವರು ಮಹಿಳೆಯರು, ಓರ್ವ ಬಾಲಕನ ಮೇಲೆ ಹಲ್ಲೆ ಮಾಡಿ, ಗೂಂಡಾ ವರ್ತನೆ ತೋರಿದ್ದಾರೆ ಎಂದು ದೂರಲಾಗಿದೆ. ಗ್ರಾಮ ಪಂಚಾಯತ್​ ಸದಸ್ಯನ ಕುಟುಂಬಸ್ಥರ ಈ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.