ETV Bharat / state

ನನ್ನೂ ಸ್ವಲ್ಪ ನೋಡ್ರೋ... ಕಂಟೈನ್ಮೆಂಟ್ ಏರಿಯಾದಲ್ಲಿ ಆಹಾರ ಸಿಗದೆ ಸಾವಿನ ಹೊಸ್ತಿಲಿನಲ್ಲಿದೆ ಈ ನಾಯಿ - ಗದಗ ಲಾಕ್​ಡೌನ್​

ನಗರದ ಎಸ್.ಎಮ್. ಕೃಷ್ಣ ನಗರದಲ್ಲಿ ಆಹಾರ ಸಿಗದೆ ಶ್ವಾನವೊಂದು ವಿಲವಿಲ ಅಂತ ಒಡಾಡುತ್ತಿರೋ ದೃಶ್ಯ ಎಂತವರನ್ನು ಮನಕಲುಕುವಂತೆ ಮಾಡಿದೆ‌.

dog
ನಾಯಿ
author img

By

Published : Apr 10, 2020, 11:42 AM IST

ಗದಗ: ಕೊರೋ‌ನಾ ವೈರಸ್​ಗೆ ಗದಗ ನಗರದ ವೃದ್ದೆ ಬಲಿಯಾದ ಹಿನ್ನಲೆ ನಗರದ ಎಸ್.ಎಮ್. ಕೃಷ್ಣ ನಗರವನ್ನು ಸಂಪೂರ್ಣವಾಗಿ ಕಂಟೈನ್ಮೆಂಟ್ ಪ್ರದೇಶ ಎಂದು ಜಿಲ್ಲಾಧಿಕಾರಿಗಳು ಘೋಷಣೆ ಮಾಡಿದ್ದಾರೆ. ಹಾಗಾಗಿ ಒಂದು ಕಡೆ ಜನರು ದಿನಸಿ ವಸ್ತುಗಳಿಗೆ ಪರದಾಡಿದ್ರೆ ಇನ್ನೊಂದು ಕಡೆ ಮೂಕ ಪ್ರಾಣಿಗಳ ರೋಧನೆ ಹೇಳತೀರದಾಗಿದೆ.

ನಿಷೇಧಿತ ಪ್ರದೇಶದಲ್ಲಿ ಆಹಾರ ಸಿಗದೆ ಶ್ವಾನವೊಂದು ವಿಲವಿಲ ಅಂತ ಒಡಾಡುತ್ತಿರೋ ದೃಶ್ಯ ಎಂತವರನ್ನು ಮನಕಲುಕುವಂತೆ ಮಾಡಿದೆ‌. ನಗರದಲ್ಲಿ ಜನಜಂಗುಳಿ ಇದ್ದಾಗ ಹೋಟೆಲ್​ಗಳು ಇಲ್ಲ ತರಕಾರಿ ಮಾರ್ಕೆಟ್ ಹೀಗೆ ಎಲ್ಲಾದರೂ ಒಂದು ಕಡೆ ಬೀದಿ ನಾಯಿಗಳಿಗೆ ಆಹಾರ ಸಿಗ್ತಿತ್ತು. ಆದ್ರೆ ಈಗ ಸಂಪೂರ್ಣ ಲಾಕ್ ಡೌನ್ ಆಗಿರೋದ್ರಿಂದ ನಾಯಿಗಳು, ಬೀದಿ ಹಸುಗಳು ಆಹಾರ ಸಿಗದೇ ನರಳಾಡ್ತಿವೆ.

ಎಸ್​.ಎಂ ಕೃಷ್ಣ ನಗರದಲ್ಲಿ ಕಂಡು ಬಂದ ಈ ನಾಯಿ ಆಹಾರ ಸಿಗದೇ ಬಿಕ್ಕಳಿಸೋ ದೃಶ್ಯ ಎಂತವರ ಕಣ್ಣಲ್ಲೂ ನೀರು ತರಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.