ಗದಗ : ಗೆಳೆಯರೊಂದಿಗೆ ಈಜಲು ಹೋಗಿದ್ದ ಬಾಲಕನೋರ್ವ ನೀರಲ್ಲಿ ಮುಳುಗಿ ಮೃತಟ್ಟಿರುವ ಘಟನೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಅಗಸ್ತ್ಯತೀರ್ಥ ಹೊಂಡದಲ್ಲಿ ಮುಳುಗಿ ಹರ್ಷವರ್ಧನ್ ಅರಕೇರಿ (15) ಮೃತಪಟ್ಟಿದ್ದಾನೆ. ಮೂಲತ: ಬ್ಯಾಡಗಿಯ ನಿವಾಸಿಯಾಗಿರುವ ಹರ್ಷವರ್ಧನ್, ದೀಪಾವಳಿ ಹಬ್ಬಕ್ಕೆಂದು ಲಕ್ಷ್ಮೇಶ್ವರದ ಸಂಬಂಧಿಕರ ಮನೆಗೆ ಬಂದಿದ್ದ. ಸ್ಥಳೀಯ ನಾಲ್ಕು ಜನ ಸ್ನೇಹಿತರೊಂದಿಗೆ ಈಜಲು ಹೋಗಿದ್ದ. ಈ ವೇಳೆ ಹೂಳಲ್ಲಿ ಸಿಲುಕಿ ಹೊರ ಬರಲಾರದೆ, ಹರ್ಷವರ್ಧನ್ ನೀರಲ್ಲಿ ಮುಳುಗಿದ್ದಾನೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಹರ್ಷವರ್ಧನ್ಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.