ಗದಗ: ಜಿಲ್ಲೆಯಲ್ಲಿಂದು ಮತ್ತೆ ಐವರು ಕೊರೊನಾ ಸೋಂಕಿತರು ಬಿಡುಗಡೆಯಾಗಿದ್ದಾರೆ. ಗದಗ ಜಿಮ್ಸ್ ನಿರ್ದೇಶಕ ಪಿ.ಎಸ್ ಭೂಸರಡ್ಡಿ ಈ ಬಗ್ಗೆ ಸ್ಪಷ್ಟಪಡಿಸಿದರು. ಇಂದು ಗದಗನ ಕೋವಿಡ್-19 ಆಸ್ಪತ್ರೆಯಿಂದ ಪಿ-973, ಪಿ-1178 ಪಿ-1180, ಪಿ-1181 ಹಾಗೂ ಪಿ-1182 ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾದರು.
ಈ ವೇಳೆ ವ್ಯಕ್ತಿಯೊಬ್ಬ ವೈದ್ಯರ ಕಾಲಿಗೆ ನಮಸ್ಕರಿಸಲು ಮುಂದಾದ ಘಟನೆಯೂ ನಡೆಯಿತು. ಗುಣಮುಖರಾಗಿ ಮನೆಗೆ ತೆರಳುತ್ತಿರುವುದರಿಂದ ಖುಷಿಯಾಗಿ ಕೃತಜ್ಞತೆ ಸಲ್ಲಿಸಲು ನಮಸ್ಕಾರಕ್ಕೆ ಮುಂದಾಗಿದ್ದ. ಈ ವೇಳೆ, ಸಿಬ್ಬಂದಿ ಚಪ್ಪಾಳೆ ತಟ್ಟಿ ಎಲ್ಲರನ್ನೂ ಬೀಳ್ಕೊಟ್ಟರು.
5 ಜನ ಗುಣಮುಖರಾಗುವುದರ ಮೂಲಕ 35ಕ್ಕೆ ಏರಿದ್ದ ಸೋಂಕಿತರ ಸಂಖ್ಯೆ 23ಕ್ಕಿಳಿದಿದೆ. ಒಟ್ಟು 35 ಸೋಂಕಿತರ ಪೈಕಿ ಇದೂವರೆಗೂ 11 ಜನ ಗುಣಮುಖರಾಗಿ ಮನೆ ಸೇರಿದ್ದಾರೆ. ಓರ್ವ ಸೋಂಕಿತ ವೃದ್ಧೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಉಳಿದ 23 ಸೋಂಕಿತರಿಗೆ ಕೊರೊನಾ ವಾರ್ಡ್ನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇಂದು ಬಿಡುಗಡೆಯಾದವರ ವಿವರ
- ಪಿ. 973 (28 ವರ್ಷದ ಪುರುಷ ರೋಗಿ, ಮಂಜುನಾಥ ನಗರ ಗದಗ) ಇವರನ್ನು ಕೋವಿಡ್ ಸೋಂಕಿತ ಎಂದು ಗುರುತಿಸಿ ಮೇ. 12ರಂದು ಜಿಮ್ಸ್ನಲ್ಲಿ ಗಂಟಲು ದ್ರವದ ಮಾದರಿಯನ್ನು ತೆಗೆದುಕೊಂಡಿದ್ದು, ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಮೇ.14ರಂದು ಕೋವಿಡ್ ಪ್ರತ್ಯೇಕತಾ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು.
- ಪಿ. 1178 (30 ವರ್ಷದ ಪುರುಷ ರೋಗಿ, ದೇರಿಹಾಲ ಶಿರೋಳ ಗದಗ) ಇವರನ್ನು ಕೋವಿಡ್ ಸೋಂಕಿತ ಎಂದು ಗುರುತಿಸಿ ಮೇ. 16ರಂದು ಜಿಮ್ಸ್ನಲ್ಲಿ ಗಂಟಲು ದ್ರವ ಮಾದರಿಯನ್ನು ತೆಗೆದುಕೊಂಡಿದ್ದು, ಅವರಿಗೆ ಸೋಂಕು ದೃಢಪಟ್ಟ ಕಾರಣ ಮೇ.17ರಂದು ಕೋವಿಡ್ ಪ್ರತ್ಯೇಕತಾ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು.
- ಪಿ. 1180(58 ವರ್ಷದ ಪುರುಷ ರೋಗಿ, ಗಂಜಿಬಸವೇಶ್ವರ ವೃತ್ತ, ಗದಗ) ಇವರಿಗೆ ಮೇ. 16ರಂದು ಸೋಂಕು ದೃಢಪಟ್ಟ ಕಾರಣ ಒಳರೋಗಿಯಾಗಿ ದಾಖಲಿಸಲಾಗಿತ್ತು.
- ಪಿ. 1181 (32 ವರ್ಷದ ಪುರುಷ ರೋಗಿ, ಗಂಜಿಬಸವೇಶ್ವರ ವೃತ್ತ, ಗದಗ) ಇವರನ್ನು ಕೋವಿಡ್ ಸೋಂಕಿತ ಎಂದು ಗುರುತಿಸಿ ಮೇ.16 ರಂದು ಜಿಮ್ಸ್ನಲ್ಲಿ ಗಂಟಲು ದ್ರವದ ಮಾದರಿಯನ್ನು ತೆಗೆದುಕೊಂಡಿದ್ದು, ಅವರಿಗೆ ಸೋಂಕು ದೃಢಪಟ್ಟ ಕಾರಣ ಮೇ. 17 ರಂದು ಕೋವಿಡ್ ಪ್ರತ್ಯೇಕತಾ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು.
- ಪಿ. 1182 (12 ವರ್ಷದ ಪುರುಷ ರೋಗಿ, ಗಂಜಿಬಸವೇಶ್ವರ ವೃತ್ತ, ಗದಗ) ಇವರನ್ನು ಮೇ. 17ರಂದು ಕೋವಿಡ್ ಪ್ರತ್ಯೇಕತಾ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು.