ಗದಗ: ಮುಂಬೈನಿಂದ ಗದಗಿಗೆ ಇಂದು ಮತ್ತೆ 47 ಪ್ರಯಾಣಿಕರು ಆಗಮಿಸಿದ್ದು, ಇಲ್ಲಿಯವರೆಗೆ ಮುಂಬೈನಿಂದ ಗದಗಿಗೆ ಬಂದ ಒಟ್ಟು ಪ್ರಯಾಣಿಕರ ಸಂಖ್ಯೆ 365 ಆಗಿದೆ.
ಇಂದು ಗದಗ ರೈಲು ನಿಲ್ದಾಣಕ್ಕೆ ಆಗಮಿಸಿದ ಮುಂಬೈ ಗದಗ ಎಕ್ಸ್‌ಪ್ರೆಸ್ ರೈಲು ಸುಮಾರು 47 ಜನರನ್ನು ಹೊತ್ತು ತಂದಿದ್ದು, ನಾಲ್ಕು ದಿನಗಳಿಂದ ಗದಗ ರೈಲು ನಿಲ್ದಾಣದಲ್ಲಿ ಸ್ಕ್ರೀನಿಂಗ್ಗೆ ಸಿಬ್ಬಂದಿ ನೇಮಕ ಮಾಡಲಾಗಿದ್ದು ಸ್ಕ್ರೀನಿಂಗ್ ಕಾರ್ಯ ನಡೆಯುತ್ತಿದೆ.
ಗದಗ ಜಿಲ್ಲೆಯಲ್ಲಿ ಒಟ್ಟು ಐದು ಕ್ವಾರಂಟೈನ್ ಕೇಂದ್ರಗಳಿದ್ದು ಸ್ಕ್ರೀನಿಂಗ್ ಬಳಿಕ ಎಲ್ಲರನ್ನ ಸರ್ಕಾರಿ ವಾಹನಗಳಲ್ಲಿ ಕ್ವಾರಂಟೈನ್ಗೆ ರವಾನೆ ಮಾಡಲಾಗ್ತಿದೆ. ಕೊಪ್ಪಳ, ಬಳ್ಳಾರಿ, ಧಾರವಾಡ ಜನರನ್ನು ಪ್ರತ್ಯೇಕ ವಾಹನದಲ್ಲಿ ಜಿಲ್ಲಾಡಳಿತ ಕಳುಹಿಸುತ್ತಿದ್ದು ಆಯಾ ಜಿಲ್ಲೆಯಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.