ಗದಗ: ಜಿಲ್ಲೆಯಲ್ಲಿಂದು ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಗು, ಬಾಲಕಿ ಸೇರಿದಂತೆ ನಾಲ್ಕು ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
26 ವರ್ಷದ ಪಿ-7386 ಮಹಿಳೆ, 11 ವರ್ಷದ ಪಿ-7387 ಬಾಲಕಿ, 3 ವರ್ಷದ ಬಾಲಕ ಪಿ-7388 ಹಾಗೂ 58 ವರ್ಷದ ಪಿ-7389 ಪುರುಷ ಸೋಂಕಿತರಾಗಿದ್ದಾರೆ. 26 ವರ್ಷದ ಪಿ-7386 ಮಹಿಳೆ, 11 ವರ್ಷದ ಪಿ-7387 ಬಾಲಕಿ, 3 ವರ್ಷದ ಬಾಲಕ ಪಿ-7388 ಮಹಾರಾಷ್ಟ್ರದಿಂದ ಬಂದವರಾಗಿದ್ದು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು.
ಇನ್ನು ಅನಾರೋಗ್ಯದಿಂದ ಬಳಲುತ್ತಿದ್ದ 58 ವರ್ಷದ ಪಿ-7389 ಪುರುಷನಿಗೆ ಸೋಂಕು ತಗುಲಿದೆ. ಈತ ರೋಣ ತಾಲೂಕಿನ ಕೋಟಮಚಗಿ ಗ್ರಾಮದ ನಿವಾಸಿಯಾಗಿದ್ದಾನೆ. ಕೊಟುಮಚಗಿ ಗ್ರಾಮವನ್ನು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಈಗಾಗಲೇ ಕಂಟೈನ್ಮೆಂಟ್ ಪ್ರದೇಶ ಅಂತ ಘೋಷಣೆ ಮಾಡಿದ್ದಾರೆ.
ಜೊತೆಗೆ ಪಾಸಿಟಿವ್ ಬಂದ ವ್ಯಕ್ತಿಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ. ಇನ್ನು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 53ಕ್ಕೆ ಏರಿದ್ದು, ಸದ್ಯ ಸಕ್ರಿಯ ಸೋಂಕಿತರು 10 ಜನರಿದ್ದಾರೆ. ಉಳಿದ 41 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.