ಗದಗ: ಗೋವಾದಲ್ಲಿರುವ ಗದಗ ಮತಕ್ಷೇತ್ರದ ಜನರಿಗೆ 30 ಟನ್ ಆಹಾರ ಪದಾರ್ಥಗಳನ್ನು ಕಳಿಸಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಈಗಾಗಲೇ ಗದಗನಿಂದ ಮೂರು ಲಾರಿಗಳ ಮೂಲಕ ಅಗತ್ಯ ಆಹಾರ ತೆಗೆದುಕೊಂಡು ಹೋಗಲು ಸಜ್ಜು ಮಾಡಲಾಗಿದೆ. ಅಕ್ಕಿ, ಸಕ್ಕರೆ, ಬೇಳೆ ಸೇರಿದಂತೆ ಅಗತ್ಯ ವಸ್ತುಗಳ ಕಿಟ್ ರವಾನೆ ಮಾಡಲಾಗುವುದು. ಇನ್ನು, ಕೊರೊನಾ ಮಹಾಮಾರಿ ನಿಯಂತ್ರಣ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಹಲವು ಪತ್ರವನ್ನು ಬರೆದಿದ್ದೇನೆ. ರಾಜ್ಯದಲ್ಲಿ ಹೆಚ್ಚು ಹೆಚ್ಚು ಜನ್ರನ್ನು ತಪಾಸಣೆಗೆ ಒಳಪಡಿಸಬೇಕು. ಆಗ ಮಾತ್ರ ಹೆಚ್ಚಿನ ಜನರಲ್ಲಿ ಸೋಂಕು ಪತ್ತೆ ಮಾಡಲು ಸಹಾಯವಾಗುತ್ತದೆ.
ಜೊತೆಗೆ ಏಳು ಜಿಲ್ಲೆಗಳ ಒಳಗೊಂಡ ಬೆಳಗಾವಿ ವಿಭಾಗಕ್ಕೆ ತಪಾಸಣೆ ಕೇಂದ್ರ ತೆರೆಯಬೇಕು. ಮೆಡಿಕಲ್ ಕಾಲೇಜ್ ಇರುವ ಪ್ರತಿಯೊಂದು ಜಿಲ್ಲೆಯಲ್ಲೂ ತಪಾಸಣೆ ಕೇಂದ್ರ ತೆರೆಯಬೇಕು ಅಂತ ಪತ್ರದಲ್ಲಿ ಅಭಿಪ್ರಾಯ ಪಟ್ಟಿದ್ದೇನೆ ಎಂದು ಮಾಜಿ ಸಚಿವ ಪಾಟೀಲ್ ವಿವರಿಸಿದರು.