ಗದಗ : ಕೃಷಿ ಹೊಂಡದಲ್ಲಿನ ನೀರು ಕುಡಿದು 30 ಕುರಿಗಳು ಮೃತಪಟ್ಟಿರುವ ಘಟನೆ ರೋಣ ತಾಲೂಕಿನ ಕಲ್ಮಠ ಗ್ರಾಮದ ಬಳಿ ನಡೆದಿದೆ.
ಕುರಿಗಾಯಿ ರಮೇಶ್ ಮುಂದಿನಮನೆ ಎಂಬವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ರಮೇಶ್ ಮುಂದಿನಮನೆ ಬಾಗಲಕೋಟೆ ಜಿಲ್ಲೆ ಗುಳ್ಳೇದಗುಡ್ಡ ತಾಲೂಕಿನ ಹಾನಾಪೂರು ಗ್ರಾಮದವರು. ಬೇಸಿಗೆ ಕಾಲವಾಗಿದ್ದರಿಂದ ಗದಗ ಜಿಲ್ಲೆಯ ಬಹುತೇಕ ಜಮೀನುಗಳು ಬೆಳೆ ಕಟಾವ್ ಮಾಡಿ ಖಾಲಿಯಾಗಿರುತ್ತವೆ. ಹೀಗಾಗಿ, ಈ ಕಡೆ ಕುರಿ ಮೇಯಿಸಲು ಬಂದಿದ್ದರು. ರೋಣ ತಾಲೂಕಿನ ಹಳ್ಳಿಗಳಲ್ಲಿ ಕುರಿ ಮೇಯಿಸಿದ್ದಾರೆ. ಅದೇ ರೀತಿ ಮೇಲ್ಮಠ ಗ್ರಾಮದ ಬಳಿ ಕುರಿ ಮೇಯಿಸಲು ಬಂದಾಗ ಈ ಅನಾಹುತ ನಡೆದಿದೆ.
ಓದಿ : ಕಾಗವಾಡ: ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ
ಕೃಷಿ ಹೊಂಡದ ನೀರಿನಲ್ಲಿ ವಿಷ ಪದಾರ್ಥ ಬೆರೆತು ಘಟನೆ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. 30 ಕುರಿಗಳು ಮೃತಪಟ್ಟರೆ, 20 ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥತವಾಗಿವೆ. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.