ಗದಗ: ಜಿಲ್ಲೆಯಲ್ಲಿ ಇಂದು ಮತ್ತೆ 19 ಕೊರೊನಾ ಪಾಸಿಟಿವ್ ಕೇಸ್ ದೃಢಪಟ್ಟಿವೆ. ಈ ಮೂಲಕ ಸೋಂಕಿತರ 199ಕ್ಕೆ ಏರಿಕೆಯಾಗಿದೆ. ಇದರಲ್ಲಿ 7 ವರ್ಷದ ಮಗು ಸಹ ಸೇರಿಕೊಂಡಿದೆ. ಗದಗಿನ ಸಿದ್ದರಾಮೇಶ್ವರ ನಗರ ನಿವಾಸಿ 31 ವರ್ಷದ ಪುರುಷ ಪಿ-10148 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 31 ವರ್ಷದ ಪುರುಷ ಪಿ-18272 ಹಾಗೂ 24 ವರ್ಷದ ಮಹಿಳೆ ಪಿ-18273ಗೆ ಸೋಂಕು ದೃಢವಾಗಿದೆ.
ಗುಜರಾತ್ನಿಂದ ಜುಲೈ 2ರಂದು ಜಿಲ್ಲೆಗೆ ಆಗಮಿಸಿದ್ದ ಗದಗ ತಾಲೂಕಿನ ಮಲ್ಲಸಮುದ್ರದ ಜಿಮ್ಸ್ ಹಾಸ್ಟೆಲ್‌ನ 19 ವರ್ಷದ ಯುವಕ ಪಿ-18283 ಮಹರಾಷ್ಟದಿಂದ ಜೂನ್ 30ರಂದು ಆಗಮಿಸಿದ್ದ ಕಳಸಾಪುರ ರಿಂಗ್ ರೋಡ್ ಪ್ರದೇಶದ 33 ವರ್ಷದ ಪುರುಷ ಪಿ-18289 ಹಾಗೂ ಹಾವೇರಿ ಜಿಲ್ಲೆಯಿಂದ ಜೂನ್ 26 ರಂದು ಜಿಲ್ಲೆಗೆ ಆಗಮಿಸಿದ ಗದಗ-ಬೆಟಗೇರಿಯ ನರಸಾಪುರದ ರಂಗಪ್ಪಜ್ಜ ಮಠದ ಹತ್ತಿರದ ನಿವಾಸಿ 60 ವರ್ಷದ ಮಹಿಳೆ ಪಿ-18271 ಇವರಿಗೆ ಜ್ವರ ಹಾಗೂ ಕೆಮ್ಮು ರೋಗ ಲಕ್ಷಣದಿಂದಾಗಿ ದೃಢಪಟ್ಟಿದೆ.
ಇನ್‌ಪ್ಲೂಯೆಂಜಾ ರೋಗ ಲಕ್ಷಣಗಳಿರುವ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ಮಲ್ಲಸಮುದ್ರದ ಅಂಜುಮನ್ ಕಾಲೇಜ್ ಹತ್ತಿರದ ನಿವಾಸಿ 31 ವರ್ಷದ ಪುರುಷ, ಪಿ-18280 ಗದಗ ನಗರದ ಕಾಗದಗೆರೆ ನಿವಾಸಿ 60 ವರ್ಷದ ಮಹಿಳೆ ಪಿ-18281 ಹಾಗೂ ಹರ್ತಿ ಗ್ರಾಮದ ಈರಣ್ಣ ದೇವಸ್ಥಾನ ಹತ್ತಿರದ ನಿವಾಸಿ 22 ವರ್ಷದ ಮಹಿಳೆ ಪಿ-18287ಗೆ ಸೋಂಕು ದೃಢಪಟ್ಟಿದೆ.
ತಾಲೂಕಿನ ಬೆಳದಡಿ ಗ್ರಾಮದ ಶಾಲೆಯ ಹಿಂಭಾಗದ ನಿವಾಸಿ 40 ವರ್ಷದ ಪುರುಷ ಪಿ-18286 ಅಡವಿ ಸೋಮಾಪುರ ತಾಂಡಾ ನಿವಾಸಿ 60 ವರ್ಷದ ಮಹಿಳೆ ಪಿ-18288ಗೆ ಸೋಂಕು ದೃಢವಾಗಿದ್ದು, ಸೋಂಕಿನ ಪತ್ತೆ ಕಾರ್ಯ ನಡೆಯುತ್ತಿದೆ.
ನರಗುಂದ ಪಟ್ಟಣದ ಗಡಿ ಓಣಿ ನಿವಾಸಿ 39 ವರ್ಷದ ಪುರುಷ ಪಿ-15320 ಸಂಪರ್ಕದಿಂದ ಅದೇ ಪ್ರದೇಶದ 7 ವರ್ಷದ ಬಾಲಕಿ ಪಿ-18275, 65 ವರ್ಷದ ಮಹಿಳೆ ಪಿ-18276, 36 ವರ್ಷದ ಮಹಿಳೆ ಪಿ-18277, 15 ವರ್ಷದ ಯುವಕ ಪಿ-18278, 42 ವರ್ಷದ ಪುರುಷ ಪಿ-18279 ಸೋಂಕು ದೃಢಪಟ್ಟಿದೆ.
ಧಾರವಾಡ ಜಿಲ್ಲೆಯಿಂದ ಜೂನ್ 30ರಂದು ಆಗಮಿಸಿದ ನರಗುಂದ ಗುಡ್ಡದ ಕೇರಿ ಅಂಬಾಭವಾನಿ ದೇವಸ್ಥಾನದ ಹತ್ತಿರದ ನಿವಾಸಿ 25 ವರ್ಷದ ಮಹಿಳೆ ಪಿ 18274 ದೃಢವಾಗಿದೆ. ಜಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಅಡ್ನೂರು ಗ್ರಾಮದ 31 ವರ್ಷದ ಪುರುಷನಿಗೆ ಪಿ-18284 ಇನ್‌ಪ್ಲೂಯೆಂಜಾ ರೋಗ ಲಕ್ಷಣದಿಂದಾಗಿ ಸೋಂಕು ದೃಢವಾಗಿದೆ.
ಲಕ್ಷ್ಮೇಶ್ವರದ 39 ವರ್ಷದ ಪುರುಷ ಪಿ-11230 ಸಂಪರ್ಕದಿಂದಾಗಿ ಲಕ್ಷ್ಮೇಶ್ವರದ ಹೊಸ ಬಸ್ ನಿಲ್ದಾಣದ ಹತ್ತಿರದ ಇಂದಿರಾ ನಗರ ನಿವಾಸಿ 40 ವರ್ಷದ ಮಹಿಳೆ ಪಿ-18285 ಸೋಂಕು ದೃಢವಾಗಿದೆ.
ಶಿರಹಟ್ಟಿ ತಾಲೂಕಿನ ಗೊಜನೂರು ಗ್ರಾಮದ 23 ವರ್ಷದ ಮಹಿಳೆ ಪಿ-18282 ಸೋಂಕು ದೃಢವಾಗಿದೆ. ಇನ್ನು ಸೋಂಕಿತರ ಪೈಕಿ 4 ವ್ಯಕ್ತಿಗಳು ಮೃತಪಟ್ಟಿದ್ದು, 81 ಜನ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 114 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಎಲ್ಲಾ ಸೋಂಕಿತರಿಗೆ ಗದಗದ ಜಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ಎಂ. ತಿಳಿಸಿದ್ದಾರೆ.