ETV Bharat / state

17ನೇ ರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಕೂಟ: ಗದಗ ಬಾಲೆಗೆ ಕಂಚಿನ ಪದಕ - ರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಕರ್ನಾಟಕದವರ ಸಾಧನೆ

16 ವರ್ಷದ ಬಾಲಕಿಯರಿಗಾಗಿ ನಡೆದ ವೈಯಕ್ತಿಕ ಟಾಯ್ ಟ್ರಾಯಲ್‌ನ 10 ಕಿ.ಮೀ. 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಕು.ಪವಿತ್ರಾ ಕುರ್ತಕೋಟಿ (41ನಿ.4ಸೆ) ನಲ್ಲಿ ಗುರಿ ಮುಟ್ಟುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾಳೆ.

17th National cycling Championship
ಗದಗ ಬಾಲೆಗೆ ಕಂಚಿನ ಪದಕ
author img

By

Published : Feb 20, 2021, 1:37 AM IST

ಗದಗ: 17ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಕ್ರೀಡಾಕೂಟ ಬಿಂಕದಕಟ್ಟಿ ಗ್ರಾಮದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಆರಂಭವಾಗಿದೆ. ಮೂರು ದಿನಗಳ ಕಾಲ ನಡೆಯಯವ ಈ ಕ್ರೀಡಾಕೂಟದ ಮೊದಲ ದಿನವೇ ಗದಗನ ಬಾಲಕಿ ಪದಕ ಗಳಿಸಿದ್ದಾಳೆ.

16 ವರ್ಷದ ಬಾಲಕಿಯರಿಗಾಗಿ ನಡೆದ ವೈಯಕ್ತಿಕ ಟಾಯ್ ಟ್ರಾಯಲ್‌ನ 10 ಕಿ.ಮೀ. 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಕು.ಪವಿತ್ರಾ ಕುರ್ತಕೋಟಿ (41ನಿ.4ಸೆ) ನಲ್ಲಿ ಗುರಿ ಮುಟ್ಟುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾಳೆ.

17ನೇ ರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಕೂಟ

ಶುಕ್ರವಾರ 14 ಮತ್ತು 16 ವರ್ಷದ ಬಾಲಕ ಮತ್ತು ಬಾಲಕಿಯರಿಗಾಗಿ ವೈಯಕ್ತಿಕ ಟಾಯ್ ಟ್ರಾಯಲ್‌ನ 10 ಕಿಮೀ 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆ ನಡೆಯಿತು. ಅದರಂತೆ, 18 ವರ್ಷದ ಬಾಲಕರಿಗಾಗಿ ವೈಯಕ್ತಿಕ ಟಾಯ್ ಟ್ರಾಯಲ್‌ನ 18.4 ಕಿಮೀ 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆ ಜರುಗಿತು.

14 ವರ್ಷದವರ ಬಾಲಕರ ವಿಭಾಗ : ಮಹಾರಾಷ್ಟ್ರದ ಅದೀಪ ವಘಾ(ಪ್ರಥಮ), ಕರ್ನಾಟಕದ ಸಮರಪನ ಜೈನ್(ದ್ವಿತೀಯ), ಅಸ್ಸೋಂನ ಮಲವ ದತ್ತಾ (ತೃತೀಯ).

ಬಾಲಕಿಯರ ವಿಭಾಗ: ಮಹಾರಾಷ್ಟ್ರದ ಸಿದ್ಧಿ ಸಿರ್ಕೇ(ಪ್ರಥಮ), ಶರವನಿ ಪರಿತ್(ದ್ವಿತೀಯ), ಕರ್ನಾಟಕದ ಚಾಯಾ ನಾಗಶೇಟ್ಟಿ (ತೃತೀಯ) ಸ್ಥಾನ ಪಡೆದಿದ್ದಾರೆ.

16 ವರ್ಷದವರ ವಿಭಾಗ: ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಕರಿನ್ ಮರ್ಶಲ್ (ಪ್ರಥಮ), ಕೇರಳದ ಅಗಸಾ ಅನ್ನ ಥೊಮಸ್(ದ್ವಿತೀಯ), ಕರ್ನಾಟಕದ ಪವಿತ್ರಾ ಕುರ್ತಕೋಟಿ (ತೃತೀಯ).

ಬಾಲಕರ ವಿಭಾಗದಲ್ಲಿ ಕರ್ನಾಟಕದ ಚರತಗೌಡ (ಪ್ರಥಮ), ಕೇರಳದ ಅದ್ವೈತ್ ಸನ್ಕರ್(ದ್ವಿತೀಯ), ಪಶ್ಚಿಮ ಬಂಗಾಳದ ಸುಧನಸು ಲಿಮಬು (ತೃತೀಯ) ಸ್ಥಾನ ಪಡೆದಿದ್ದಾರೆ.

18 ವರ್ಷದವರ ವಿಭಾಗ: ಬಾಲಕರ ವಿಭಾಗದಲ್ಲಿ ಕರ್ನಾಟಕದ ಅಡೋನಿಸ್ ತನಗ್ಪು (ಪ್ರಥಮ), ಹರ್ಶಿತ ಕೆ.ಜೆ.(ದ್ವಿತೀಯ) ಹಾಗೂ ಪ.ಬಂಗಾಳದ ರಾಜಕುಮಾರ ರಾಯ್ (ತೃತೀಯ) ಸ್ಥಾನ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.