ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಯುವಕನೋರ್ವನನ್ನು ಕೊಲೆಗೈದು ಎಸೆಯಲಾಗಿದೆ.
ಧಾರವಾಡ ಕೆಲಗೇರಿ ನಿವಾಸಿ ನಾಗರಾಜ ಹರಪನಹಳ್ಳಿ (23) ಎಂಬಾತ ಕೊಲೆಯಾದ ಯುವಕ. ಧಾರವಾಡ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಹಿಂಬದಿ ಕೊಲೆ ಮಾಡಿ ಶವವನ್ನು ಎಸೆಯಲಾಗಿದೆ.
![dead body](https://etvbharatimages.akamaized.net/etvbharat/prod-images/kn-dwd-3-yuvak-murder-av-ka10001_29072019210840_2907f_1564414720_44.jpg)
ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಯುವಕ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದ ಎನ್ನಲಾಗಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.