ಹುಬ್ಬಳ್ಳಿ: ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಯುವತಿಯೋರ್ವಳು ತನ್ನ ತಾಯಿಗೆ ಧೈರ್ಯದ ಮಾತುಗಳನ್ನಾಡಿದ್ದಾಳೆ.
ಇಲ್ಲಿನ ಶಾಂತಿನಗರದ ನಿವಾಸಿ ನಾಝೀಲಾ ಎಂಬ ವಿದ್ಯಾರ್ಥಿನಿ ಎಂಬಿಬಿಎಸ್ ವ್ಯಾಸಂಗಕ್ಕಾಗಿ ಉಕ್ರೇನ್ಗೆ ತೆರಳಿದ್ದಾಳೆ. ಸದ್ಯ ಸುರಕ್ಷಿತವಾಗಿದ್ದು, ತಾಯಿ ನೂರ್ ಜಹಾನ್ ಗಾಜಿಪುರಗೆ ವಾಟ್ಸಾಪ್ ಸಂದೇಶ ಕಳುಹಿಸಿ ಧೈರ್ಯ ಮಾತುಗಳನ್ನು ಹೇಳಿದ್ದಾಳೆ.
'ನಾನು ಗಡಿ ದಾಟಿದ್ದು, ಉಕ್ರೇನ್- ಹಂಗೇರಿ ಪೊಲೀಸರ ಜೊತೆಗೆ ಸುರಕ್ಷಿತವಾಗಿದ್ದೇನೆ. ನನಗೆ ಉಪಹಾರ ಸೇರಿದಂತೆ ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಭಾರತೀಯ ರಾಯಭಾರಿಯವರು ಇಲ್ಲಿಗೆ ಬಂದು ನಮ್ಮನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಸದ್ಯ ನೆಟ್ವರ್ಕ್ ಸಮಸ್ಯೆ ಇದೆ. ನನ್ನ ಬಗ್ಗೆ ಯೋಚನೆ ಮಾಡಬೇಡಿ, ನೀವು ಆರಾಮವಾಗಿರಿ, ನಾನು ಹುಷಾರಾಗಿ ದೇಶಕ್ಕೆ ಮರಳುತ್ತೇನೆ' ಎಂದು ತಿಳಿಸಿದ್ದಾಳೆ.
ಇದನ್ನೂ ಓದಿ: ಚೊಚ್ಚಲ ಬಜೆಟ್ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥನೆ ಏನು?