ಧಾರವಾಡ : ಕಲೆ ಎಂಬುದು ಯಾರೊಬ್ಬರ ಸ್ವತ್ತು ಅಲ್ಲ. ಮನಸ್ಸಿದ್ದರೆ ಕಲೆಯನ್ನ ಕರಗತ ಮಾಡಿಕೊಳ್ಳಬಹುದು. ಹಾಗೆ ಕೈಯಲ್ಲಿ ಬಣ್ಣದ ಪೆನ್ಸಿಲ್ ಹಿಡಿದ ತಕ್ಷಣ ಕಲಾದೇವಿ ಒಲಿಯುವುದೂ ಇಲ್ಲ. ಕೆಲವೊಂದು ತಪಸ್ಸಿದ್ದಂತೆ. ಈಗ 16 ವರ್ಷದ ವಿದ್ಯಾರ್ಥಿಯೊಬ್ಬನ ಚಿತ್ರಕಲೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಅವರ ಕಚೇರಿಯಿಂದಲೇ ಅಭಿನಂದನಾ ಪತ್ರ ತಲುಪಿದೆ. ಆ ಮೂಲಕ ಕಲಾತಪಸ್ಸಿಗೊಂದು ಬೆಲೆ ಬಂದಿದೆ.
ಧಾರವಾಡದ ಮಾರಡಗಿ ಗ್ರಾಮದ ಸಚಿನ್ ಈಗಿನ್ನೂ 16 ವರ್ಷದ ನವಯುವಕ. ಆದ್ರೆ, ಪೆನ್ಸಿಲ್ ಹಿಡಿದು ಕುಳಿತರೆ ಎಂತಹ ಚಿತ್ರವನ್ನಾಗಲಿ ಕ್ಷಣಾರ್ಧದಲ್ಲಿ ಬಿಡಿಸಿ ಬಿಡುತ್ತಾರೆ. ರೈತ ಕುಟುಂಬದಲ್ಲಿ ಜನಿಸಿದ ಸಚಿನ್ಗೆ ಕಲೆ ಎಂದರೆ ಇನ್ನಿಲ್ಲದ ಆಸಕ್ತಿ. ಹೀಗಾಗಿ, ಕಳೆದ ಲಾಕ್ಡೌನ್ ವೇಳೆ ಚಿತ್ರಕಲೆ ಬಿಡಿಸಲು ಮುಂದಾಗಿದ್ದರಂತೆ. ಇದೀಗ ಎಲ್ಲಾ ಮಹನಿಯರ ಚಿತ್ರ ಅವರ ಗುಚ್ಚದಲ್ಲಿ ಅರಳಿದೆ.
ಸಚಿನ್ ಕೈಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಚಿಂತಕರು, ಕ್ರಿಕೆಟಿಗರು, ರಾಜಕೀಯ ವ್ಯಕ್ತಿಗಳು ಸೇರಿ ಒಟ್ಟು 60ಕ್ಕೂ ಹೆಚ್ಚು ಚಿತ್ರಗಳನ್ನ ಬಿಡಿಸಿದ್ದಾರೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟಿಗ ವಿರಾಟ್ ಕೊಹ್ಲಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಜ್ಯೋತಿರಾವ್ ಫುಲೆ ಹಾಗೂ ಸಾವಿತ್ರಿ ಬಾಯಿ ಫುಲೆ ಸೇರಿ ಅನೇಕ ಗಣ್ಯರು ಅರಳಿದ್ದಾರೆ.
ಈ ಕಲೆಗೆ ಸಚಿನ್ ಕುಟುಂಬಸ್ಥರು ಸಹ ಪ್ರೋತ್ಸಾಹ ನೀಡಿದ್ದಾರೆ. ಸಚಿವ ಕಲೆಯಲ್ಲಿ ಆಸಕ್ತಿ ಗಮನಿಸಿದ ಕುಟುಂಬ ಯುವ ಕಲಾವಿದನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಸಚಿನ್ ಬಡಿಸಿದ್ದ ಚಿತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಲಾಗಿತ್ತು. ಈ ಚಿತ್ರಗಳನ್ನ ಗಮಿಸಿದ ಅವರು ಅಭಿನಂದನಾ ಪತ್ರ ನೀಡಿ ಸಚಿನ್ ಕಲೆಗೆ ಹರಸಿದ್ದಾರೆ. ಮೋದಿ ಶ್ಲಾಘನೆಯಿಂದ ಸಚಿನ್ ಆಸಕ್ತಿ ಇಮ್ಮಡಿಯಾಗಿದ್ದು, ಚಿತ್ರಕಲೆಯಲ್ಲಿ ಇನ್ನಷ್ಟು ಸಾಧಿಸುವ ತುಡಿತ ಹೊಂದಿದ್ದಾರೆ.
ಇದನ್ನೂ ಓದಿ: ತಗ್ಗಿತೇ ಎಣ್ಣೆಪ್ರಿಯರ ಜೋಶ್? ಮಾರಾಟಕ್ಕೆ ಅವಕಾಶ ಇದ್ರೂ ಮದ್ಯ ವ್ಯಾಪಾರ ಕುಸಿತ